ವಿಜಯಸಾಕ್ಷಿ ಸುದ್ದಿ, ಗದಗ: ಪ್ರಾಥಮಿಕ ಆರೋಗ್ಯ ಕೇಂದ್ರ ಹುಯಿಲಗೋಳ ವ್ಯಾಪ್ತಿಯ ನೀರಲಗಿ ಉಪ ಕೇಂದ್ರದ ವತಿಯಿಂದ ನೀರಲಗಿ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಡಳಿತ ವೈದ್ಯಾಧಿಕಾರಿ ಡಾ. ಪ್ರೀತಮ್ ಕೋನಾ ಅಧ್ಯಕ್ಷತೆಯಲ್ಲಿ ಡೆಂಗ್ಯು ವಿರೋಧಿ ಮಾಸಾಚರಣೆ ನಡೆಯಿತು.
Advertisement
ಈ ಸಂದರ್ಭದಲ್ಲಿ ಮಂಜುನಾಥ ಜಾಲಿಹಾಳ, ನಾಗರಾಜ್ ಜೋಷಿ, ಸಂತೋಷ್ ಗದಗಿನ, ಶೀಲಾ ಮಳೇಕರ್, ಸವಿತಾ ಪವಾರ್, ಆಶಾ ಸಿಬ್ಬಂದಿಗಳಾದ ವಾಯ.ಎಸ್. ವಾಲ್ಮೀಕಿ, ಈರಮ್ಮ ಕುಂದಗೋಳಮಠ ಡೆಂಗ್ಯೂ ಬಗ್ಗೆ ಅಭಿಮತವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು, ಹರಡುವಿಕೆ ಮತ್ತು ತಡೆಗಟ್ಟುವಿಕೆ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಯಿತು.