ಟಾಲಿವುಡ್ ಸ್ಟಾರ್ ಬ್ಯೂಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ. ಅನುಷ್ಕಾ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋಲನುಭವಿಸುತ್ತಿವೆ. ಇತ್ತೀಚೆಗೆ ತೆರೆಕಂಡ ಘಾಟಿ ಸಿನಿಮಾ ಹೀನಾಯವಾಗಿ ಸೋತ್ತಿದ್ದು ಇದರಿಂದ ಸ್ವೀಟಿ ಬೇಸರಗೊಂಡಿದ್ದಾರೆ. ಈ ಬೆನ್ನಲ್ಲೇ ನಟಿ ಅನುಷ್ಕಾ ದೊಡ್ಡ ನಿರ್ಧಾರವೊಂದರನ್ನು ತೆಗೆದುಕೊಂಡಿದ್ದು ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಅನುಷ್ಕಾ ಶೆಟ್ಟಿ, ‘ಅರುಂಧತಿ’, ‘ಭಾಗಮತಿ’, ‘ವೇದಂ’, ‘ಬಾಹುಬಲಿ’, ‘ಸೈಜ್ ಝೀರೋ’ ಇನ್ನೂ ಹಲವಾರು ಸಿನಿಮಾಗಳಲ್ಲಿ ಅದ್ಭುತವಾದ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೇವಲ ಮರ ಸುತ್ತುವ ಸಿನಿಮಾಗಳಿಗೆ ಸೀಮಿತವಾಗದೇ ಸೈ ಎನಿಸಿಕೊಳ್ಳುವ ಪಾತ್ರಗಳನ್ನು ಮಾಡಿ ಖ್ಯಾತಿ ಘಳಿಸಿದ್ದಾರೆ. ಕೆಲ ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದು ನಟಿ ಇತ್ತೀಚೆಗೆ ಮತ್ತೆ ಕಮ್ ಬ್ಯಾಕ್ ಮಾಡಿದರಾದರೂ ನಿರೀಕ್ಷಿತ ಮಟ್ಟದಲ್ಲಿ ಸಕ್ಸಸ್ ಕಾಣುತ್ತಿಲ್ಲ.
ಕ್ರಿಶ್ ಜಗಲಮರಡು ನಿರ್ದೇಶನದ ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದೆ. ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗಾಗಿ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಗಿದೆ. ಸಿನಿಮಾ ಬಿಡುಗಡೆ ವೇಳೆ ಅನುಷ್ಕಾ ಶೆಟ್ಟಿ ಪ್ರಚಾರಕ್ಕೆ ಸಹ ಬಂದಿರಲಿಲ್ಲ. ಇದು ಸಹ ಸಿನಿಮಾದ ಬಾಕ್ಸ್ ಆಫೀಸ್ ಪ್ರದರ್ಶನದ ಮೇಲೆ ಪರಿಣಾಮ ಬೀರಿದ ಎನ್ನಲಾಗುತ್ತಿದೆ.
ಘಾಟಿ ಸಿನಿಮಾ ಫ್ಲಾಪ್ ಆದ ಬೆನ್ನಲ್ಲೆ ಅನುಷ್ಕಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಹೇಳಿರುವಂತೆ ಅವರು ಕೆಲ ಸಮಯ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಲಿದ್ದಾರಂತೆ. ಈ ವರ್ಚ್ಯುಲ್ ಜಗತ್ತಿನ ಬದಲಿಗೆ ನಿಜವಾದ ಪ್ರಪಂಚದಲ್ಲಿ ಬದುಕಲೆಂದು ಸಾಮಾಜಿಕ ಜಾಲತಾಣದಿಂದ ದೂರ ಉಳಿಯುತ್ತಿರುವುದಾಗಿ ಅನುಷ್ಕಾ ಹೇಳಿದ್ದಾರೆ. ಜೊತೆಗೆ ತಮ್ಮ ಮುಂದಿರುವ ಕೆಲವು ಕೆಲಗಳನ್ನು ಪೂರ್ಣ ಮಾಡಲೆಂದು ಸಹ ಅವರು ಈ ನಿರ್ಧಾರ ಕೈಗೊಂಡಿದ್ದಾರಂತೆ.



