ಮದುವೆ ಬಳಿಕ ಮೊದಲ ಬಾರಿಗೆ ಲವ್‌ ಸ್ಟೋರಿ ರಿವೀಲ್‌ ಮಾಡಿದ ಅನುಶ್ರೀ

0
Spread the love

ಖ್ಯಾತ ನಿರೂಪಕಿ ಅನುಶ್ರೀ ಹಾಗೂ ಉದ್ಯಮಿ ರೋಷನ್ ಇಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೊರ ವಲಯದ ಸಂಭ್ರಮ ಬೈ ಸ್ವಾಲೈನ್ಸ್ ಸ್ಟುಡಿಯೋದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಮದುವೆಯ ಬಳಿಕ ಮೊದಲ ಭಾರಿಗೆ ತಮ್ಮ ಲವ್‌ ಸ್ಟೋರಿಯನ್ನು ಅನುಶ್ರೀ ರಿವೀಲ್‌ ಮಾಡಿದ್ದಾರೆ.

Advertisement

ಅನುಶ್ರೀ  ಹಾಗೂ ರೋಷನ್ ಇಬ್ಬರು ಅಪ್ಪು ಅಭಿಮಾನಿ. ಪುನೀತ ಪರ್ವದಲ್ಲಿ ನಾನು ಅವರನ್ನು ಭೇಟಿ ಮಾಡಿದೆ. ಪುನೀತ್ ಅವರೇ ನಮ್ಮನ್ನು ಸೇರಿಸಿದ್ದಾರೆ’ ಎಂದು ಅನುಶ್ರೀ ಹೇಳಿದ್ದಾರೆ.

ಮದುವೆಯ ಬಳಿಕ ಮಾತನಾಡಿದ ನಿರೂಪಕಿ ಅನುಶ್ರೀ, ಮದುವೆ ಸುಂದರವಾಗಿ ಸರಳವಾಗಿ ನಡೆದಿದೆ. ರೋಷನ್‌‌ ಬೆಂಗಳೂರಿನಲ್ಲಿ ಇರೋದು. ಎಲ್ಲ ಪ್ರೀತಿ ಪಾತ್ರರಿಗೆ ಧನ್ಯವಾದ. ನಮ್ಮದು ತುಂಬಾ ಸಿಂಪಲ್‌‌ ಲವ್‌ ಸ್ಟೋರಿ. ಇಬ್ಬರೂ ಫ್ರೆಂಡ್ಸ್‌ ಆದ್ವಿ. ಕಾಫಿ ಕುಡಿದ್ವಿ. ನಂಗೆ ಅವರು ಇಷ್ಟ ಆದರು. ಅವರಿಗೆ ನಾನು ಇಷ್ಟವಾದೆ. ಲವ್‌ ಆಯ್ತು. ಈಗ ಮದುವೆ ಆಯ್ತು. ರೋಷನ್ ಕೂಡ ಅಪ್ಪು ಅವರ ಆತ್ಮೀಯ ಸ್ನೇಹಿತರು ಎಂದು ಹೇಳಿದ್ದಾರೆ.

ಅಪ್ಪು ಅಂದರೆ ಅವರಿಗೆ ತುಂಬಾ ಇಷ್ಟ. ಅಪ್ಪು ಅವರ ಕಾರ್ಯಕ್ರಮ ಮೂಲಕವೇ ನಾವು ಭೇಟಿ ಆಗಿದ್ದು. ಒಂದು ಲೆಕ್ಕದಲ್ಲಿ ಅಪ್ಪು ಅವರೇ ನಮ್ಮನ್ನು ಸೇರಿಸಿದ್ದಾರೆ. 5 ವರ್ಷದಿಂದ ಇಬ್ಬರಿಗೂ ಪರಿಚಯ. ನಂತರ ಮೂರು ವರ್ಷಗಳಿಂದ ಸ್ವಲ್ಪ ಕ್ಲೋಸ್‌ ಆಗಿದ್ದು ಎಂದು ಹೇಳಿದ್ದಾರೆ.

ಇನ್ನೂ ಅನುಶ್ರೀ ಮದುವೆಗೆ ರಾಜ್​ ಬಿ ಶೆಟ್ಟಿ, ನೆನಪಿರಲಿ ಪ್ರೇಮ್, ಕಾವ್ಯ ಶಾ, ಸೋನಲ್ ಮೊಂಥೆರೋ, ನಟ ನಾಗಭೂಷಣ್, ಚೈತ್ರಾ ಜೆ ಆಚಾರ್, ನಟ ಶರಣ್. ಹಂಸಲೇಖ, ತರುಣ್‌ ಸುಧೀರ್​ ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ.


Spread the love

LEAVE A REPLY

Please enter your comment!
Please enter your name here