ಬೆಂಗಳೂರು: ಯಾರಿಗಾದರೂ ತಮ್ಮ ತಪ್ಪು ಅರಿವಾಗಿದ್ರೆ ಪಕ್ಷಕ್ಕೆ ಮರಳಿ ಬರಬಹುದು, ಇದಕ್ಕೆ ಮುಕ್ತ ಅವಕಾಶ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ತಮ್ಮ ತಪ್ಪು ಅರಿವಾದರೆ ಯಾರೇ ಆದರೂ ಸಹ ಪಕ್ಷಕ್ಕೆ ಮರಳಬಹುದು.
ಈಶ್ವರಪ್ಪ ಘರ್ ವಾಪ್ಸಿ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಇದೆಲ್ಲಾ ಕೇಂದ್ರದ ಮಟ್ಟದಲ್ಲಿ ಚರ್ಚೆ ಆಗುವ ವಿಚಾರ. ನಮ್ಮ ಹಂತದಲ್ಲಿ ಚರ್ಚೆ ಆಗಲ್ಲ. ಆದ್ರೆ ಯಾರ‍್ಯಾರು ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡು ವಾಪಸ್ ಬರಬೇಕು ಅನ್ಕೊಂಡಿದ್ದಾರೋ ಅವರು ಬರಬಹುದು ಎಂದು ಹೇಳಿದ್ದಾರೆ.
ಇನ್ನು ಅಮಿತ್ ಶಾ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಎಲ್ಲರೂ ವ್ಯತ್ಯಾಸ ಮರೆತು ಹೋಗಿ ಮುಂದೆ ಸಾಗಿ ಎಂದು ಅಮಿತ್ ಶಾ ಸೂಚಿಸಿದ್ದಾರೆ. ಹಳೆಯದೆಲ್ಲಾ ಮರೆತು ಒಟ್ಟಾಗಿ ಹೋಗಿ ಎಂದು ಕಿವಿಮಾತು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.



