ಎಪಿಎಲ್ ಸೀಜನ್-1 ಕ್ರಿಕೆಟ್ ಸಮಾರೋಪ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಡಾ. ಎಚ್.ಕೆ. ಪಾಟೀಲ ಅಭಿಮಾನಿಗಳ ಬಳಗದ ವತಿಯಿಂದ ನರಸಾಪೂರ ಆಶ್ರಯ ಕಾಲೋನಿಯಲ್ಲಿ ಎಪಿಎಲ್ ಸೀಜನ್ ಒನ್ ಕ್ರಿಕೆಟ್ ಲೀಗ್‌ನ ಸಮಾರೋಪ ಸಮಾರಂಭ ಜರುಗಿತು.

Advertisement

ಕ್ರೀಡಾ ಪ್ರೇಮಿಗಳು ಹಾಗೂ ಕಾಂಗ್ರೆಸ್ ಮುಖಂಡರಾದ ಸಾದಿಕ್ ನರಗುಂದ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿ, ಕ್ರೀಡಾಕೂಟದಲ್ಲಿ ಸೋಲು-ಗೆಲವು ಸಹಜ. ಪಾಲ್ಗೊಳ್ಳುವಿಕೆ ಮುಖ್ಯವಾಗುತ್ತದೆ. ಆದ್ದರಿಂದ ಯುವಕರು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು ಉತ್ತಮ ಪ್ರಜೆಗಳಾಗಿರಿ ಎಂದು ಹೇಳಿ, ಲೀಗ್ ಮ್ಯಾಚ್‌ನಲ್ಲಿ ವಿಜೇತರಾದ ಮುಂಬಯಿ ತಂಡಕ್ಕೆ ಬಹುಮಾನ ಹಾಗೂ ಕಪ್ ವಿತರಿಸಿ ಅಭಿನಂದಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕ್ರಿಕೆಟ್ ವ್ಯವಸ್ಥಾಪಕ, ಕಾಂಗ್ರೆಸ್ ಮುಖಂಡರಾದ ಶಾಕೀರ ಕಾತರಕಿ ವಹಿಸಿ ಮಾತನಾಡಿ, ಸತತ ನಾಲ್ಕು ದಿನಗಳವರೆಗೆ ಉತ್ತಮ ಆಟವಾಡಿದ ಎಲ್ಲಾ ಆಟಗಾರರಿಗೆ ಅಭಿನಂದಿಸಿ, ಎಲ್ಲರ ಸಹಕಾರದಿಂದ ಎಪಿಎಲ್ ಸೀಜನ್ ಒನ್ ಲೀಗ್ ಕ್ರಿಕೆಟ್ ಯಶಸ್ವಿಯಾಗಿದೆ. ಮುಂದಿನ ಸೀಜನ್-2 ಲೀಗ್‌ನಲ್ಲಿ ಹೆಚ್ಚಿನ ಯುವಕರು ಪಾಲ್ಗೊಳ್ಳಿ ಎಂದರು.

ಈ ಸಂದರ್ಭದಲ್ಲಿ ಸಂಗಮೇಶ ಹಾದಿಮನಿ, ಮುಂಬೈ ಟೀಮ್ ಮಾಲಕರಾದ ತಾಹೀರ್ ಮುಲ್ಲಾ , ಕ್ಯಾಪ್ಟನ್ ರಾಜು ಭರಮಣ್ಣವರ, ರನ್ನರ್ ಆಫ್ ಟೀಮ್ ಕೊಲ್ಕತ್ತಾ ಮಾಲಕ ಲಿಯಾಕಾತ, ಲಕ್ಷ್ಮೇಶ್ವರ ಕ್ಯಾಪ್ಟನ್ ಸಗೀರ್ ಹಣಗಿ, ರಾಮಣ್ಣ ರಾಂಪುರ್, ಬೋದ್ಲೆಖಾನ್, ಬಸನಗೌಡ ಮಲ್ಲಾಪುರ್, ಮಲಿಕ್ ಮೆಹಬೂಬ, ಇರ್ಫಾನ್, ವೆಂಕಟೇಶ್, ಸಾಗರ್, ಬಸು ಹದ್ದಣ್ಣವರ್, ಸಲೀಂ ಕಾತರಕಿ, ಮಲ್ಲಾಪುರ್ ಗೌಡ್ರು, ರಿಯಾಜ್ ದಾಯಮ್ಮನವರ, ರಾಜು ಹಣಗಿ, ಮಹಮ್ಮದ್ ಮದಲಿವಾಲೆ, ವಾಸು ಜೋಗಿ, ಕಮರ್ ಅಲಿ ಬೇಗ್ ಸೇರಿದಂತೆ ಬಡಾವಣೆಯ ಯುವಕರು ಹಿರಿಯರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here