ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ: ಅಕ್ರಮ ಪಡಿತರ ಅಕ್ಕಿ ದಾಸ್ತಾನು ಮಾಡಿರುವ ಕುರಿತ ಮಾಹಿತಿ ಆಧರಿಸಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿದಾಗ, ಪ್ರಕರಣದ ವರದಿಗೆ ತೆರಳಿದ್ದ ಖಾಸಗಿ ಸುದ್ದಿ ವಾಹಿನಿಯ ಕ್ಯಾಮರಾಮನ್ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಹಾಗೂ ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಜಿಲ್ಲಾಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ವಿತರಿಸುವ ಅಕ್ಕಿಯನ್ನು ದಂಧೆಕೋರರು ಜಿಲ್ಲೆಯ ಹಲವೆಡೆ ಕಡಿಮೆ ಬೆಲೆಗೆ ಖರೀದಿಸಿ ಹಾವೇರಿಯ ಅಕ್ಕಿಪೇಟೆಯಲ್ಲಿನ ಬಾಡಿಗೆ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದರು. ಅಕ್ರಮ ದಂಧೆಕೋರರು ಅಕ್ಕಿ ದಾಸ್ತಾನು ಮಾಡಿದ್ದರ ಬಗ್ಗೆ ಖಚಿತ ಮಾಹಿತಿ ತಿಳಿದುಕೊಂಡು ಆಹಾರ ಇಲಾಖೆ ಅಕಾರಿಗಳು ರವಿವಾರ ಮಧ್ಯಾಹ್ನ ದಾಳಿ ನಡೆಸಿದ್ದರು. ಸದರಿ ಪ್ರಕರಣದ ವರದಿಗೆಂದು ತೆರಳಿದ್ದ ಮಾಧ್ಯಮದವರ ಮೇಲೆ ಅಕ್ರಮ ದಂಧೆಕೋರರು ಹಲ್ಲೆ ಮಾಡಿದ್ದು, ಕೂಡಲೇ ಹಲ್ಲೆಗೈದ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಪತ್ರಕರ್ತರ ಸಂಘದ ಪದಾಧಿಕಾರಿಗಳು ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ, ಎಸ್‌ಪಿ ಅಂಶುಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕಾನಿಪ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಧ್ಯಕ್ಷ ನಾಗರಾಜ ಕುರವತ್ತೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಮಡ್ಲೂರ, ಪತ್ರಕರ್ತರಾದ ಬಸವರಾಜ ಮರಳಿಹಳ್ಳಿ, ಕೇಶವಮೂರ್ತಿ ವಿ.ಬಿ., ಕಿರಣ ಮಾಸಣಗಿ, ಅಣ್ಣಪ್ಪ ಬಾರ್ಕಿ, ಫಕ್ಕೀರಯ್ಯ ಗಣಾಚಾರಿ, ಪವನಕುಮಾರ ಮುಳಗುಂದಮಠ, ಮಾರುತಿ ಬಿ.ಎಂ., ಶಿವಕುಮಾರ ಹುಬ್ಬಳ್ಳಿ, ಶಿವಕುಮಾರ ಮಡಿವಾಳರ, ವಿರೇಶ ಬಾರ್ಕಿ, ಪ್ರಶಾಂತ ಮರೆಮ್ಮನವರ, ರಾಜೇಂದ್ರ ರಿತ್ತಿö, ಮಂಜುನಾಥ ದಾಸಣ್ಣನವರ, ವಿನಾಯಕ ಹುದ್ದಾರ, ಎಂ.ಡಿ. ಹಣಗಿ, ನಿಂಗಪ್ಪ ಆರೇರ, ರವಿ ಹೂಗಾರ, ಫಕ್ಕೀರಗೌಡ ಪಾಟೀಲ, ನಾಗರಾಜ ಮೈದೂರ, ಶಂಕರ ಕೊಪ್ಪದ, ರಾಜು ಗಾಳೇರ, ನಿಂಗಪ್ಪ ಕಡಪಟ್ಟಿ, ಫಕ್ಕೀರಸ್ವಾಮಿ ಮಟ್ಟೆಣ್ಣನವರ, ವಿರೇಶ ಹ್ಯಾಡ್ಲ, ಮದರಸಾಬ ಮಂಜಲಾಪುರ ಮುಂತಾದವರು ಹಾಜರಿದ್ದರು.

ಮನವಿ ಸ್ವೀಕರಿಸಿ ಮಾತನಾಡಿದ ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ, ಈ ಕುರಿತು ಸೂಕ್ತ ಮತ್ತು ತುರ್ತು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ಎಸ್‌ಪಿ ಅಂಶುಕುಮಾರ ಮಾತನಾಡಿ, ಆರೋಪಿತರ ಈ ಹಿಂದಿನ ಆರೋಪ ಪಟ್ಟಿ ಪರಿಶೀಲಿಸಿ ಕಠಿಣ ಕಾನೂನು ಕ್ರಮಗಳನ್ನು ಜರುಗಿಸುವ ಭರವಸೆ ನೀಡಿದರು.


Spread the love

LEAVE A REPLY

Please enter your comment!
Please enter your name here