ರುದ್ರಭೂಮಿ ಅಭಿವೃದ್ಧಿಗೆ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿರುವ ವಿವಿಧ ಸಮಾಜಗಳ ರುದ್ರಭೂಮಿಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗಳಿವೆ. ಅಲ್ಲದೆ ಪುರಸಭೆಯಲ್ಲಿರುವ ಶವ ಸಾಗಣೆ ವಾಹನ ಸಂಪೂರ್ಣ ಶಿಥಿಲಗೊಂಡಿರುವದರಿಂದ ಅದನ್ನು ದುರಸ್ತಿಪಡಿಸುವಂತೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ಮಹಾತೇಂಶ ಬೀಳಗಿ ಮನವಿ ಅರ್ಪಿಸಲಾಯಿತು.

Advertisement

ಈ ವೇಳೆ ಮಾತನಾಡಿದ ತಾಲೂಕಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ಹಾಗೂ ಸಾಮಾಜಿಕ ಕಾರ್ಯಕರ್ತ ಶಂಕರ ಬ್ಯಾಡಗಿ, ಪಟ್ಟಣದ ಹಿರೇಬಣದಲ್ಲಿರುವ ಮಹಾಂತಿನಮಠ ರುದ್ರಭೂಮಿ ತಾಜ್ಯ ವಸ್ತುಗಳನ್ನು ಎಸೆಯುವ ತಾಣವಾಗಿದೆ. ಬೀದಿ ದೀಪ, ಕುಳಿತುಕೊಳ್ಳಲು ಆಸನಗಳು, ನೀರಿನ ವ್ಯವಸ್ಥೆ ಇತ್ಯಾದಿಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಗುತ್ತದೆ. ಅಂತೆಯೇ ಮಹಾಂತೀನಮಠದ ರುದ್ರಭೂಮಿಗೆ ಹೊಂದಿಕೊಂಡು ಸರಕಾರಿ ಪ್ರೌಢಶಾಲೆಯಿದ್ದು, ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದಕ್ಕೆ ಯಾವುದೇ ರೀತಿಯ ಭದ್ರತೆ ಇಲ್ಲದೆ, ವಿಷಜಂತುಗಳು ಹೆಚ್ಚುವಂತಾಗಿದೆ. ಕೂಡಲೇ ಇವುಗಳ ಬಗ್ಗೆ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಾಗರಾಜ ಚಿಂಚಲಿ, ಗಿರೀಶ ಅಗಡಿ, ಹೊನ್ನಪ್ಪ ವಡ್ಡರ, ಶಾಂತಣ್ಣ ಯರ್ಲಗಟ್ಟಿ, ಪ್ರವೀಣ ಯರ್ಲಗಟ್ಟಿ, ನಾರಾಯಣಪ್ಪ ಗಾರ್ಗಿ, ಪ್ರಕಾಶ ಮಾದನೂರ, ಬಸವರಾಜ ಗೋಡಿ, ಮಂಜುನಾಥ. ಒಂಟಿ, ಶಿವಪುತ್ರಪ್ಪ ಯರ್ಲಗಟ್ಟಿ, ಸಿ.ಆರ್. ಲಕ್ಕುಂಡಿಮಠ, ಅಭಯ ಜೈನ, ಪವನ ಬಂಕಾಪುರ, ಸಾಗರ ಕಲಾಲ, ವೀರಭದ್ರಪ್ಪ ಕಲಕೋಟಿ, ಚಂದ್ರಣ್ಣ ಯರ್ಲಗಟ್ಟಿ ಮುಂತಾದವರಿದ್ದರು.

 


Spread the love

LEAVE A REPLY

Please enter your comment!
Please enter your name here