ವಿಜಯಸಾಕ್ಷಿ ಸುದ್ದಿ, ಗದಗ : ದಿವಾಣಜಿ ಜಮಾತ ಮಸ್ಜೀದ್ ಮತ್ತು ಅಂಜುಮನ್ ಮಸೀದಿಯ ಅಧಿಕೃತವಲ್ಲದ ಕಮಿಟಿಯನ್ನು ನೋಂದಣಿ ಮಾಡಬಾರದೆಂದು ಸದಸ್ಯರು ಗದಗ ಜಿಲ್ಲಾ ವಕ್ಫ ಬೋರ್ಡ್ ಅಧ್ಯಕ್ಷ ದಂಡಿನರವರಿಗೆ, ಜಿಲ್ಲಾ ವಕ್ಫ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಸ್ಜೀದಿಯ ಸದಸ್ಯರಾದ ಮಹಮ್ಮರಫೀಕ ಬಡ್ನಿ ಮಾತನಾಡಿ, ಸದರಿ ಸಂಸ್ಥೆಯ ಕೆಲವು ಸದಸ್ಯರು ಕಮಿಟಿಯ ಯಾವುದೇ ಅಧಿಕೃತ ಠರಾವು ವಗೈರೆ ಇಲ್ಲದೇ, ಸಂಸ್ಥೆಯ ಎಲ್ಲಾ ಸದಸ್ಯರ ಒಪ್ಪಿಗೆ ತೆಗೆದುಕೊಳ್ಳದೇ, ಸಂಸ್ಥೆಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಮಿಟಿ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ.
ಸದರಿ ಸಂಸ್ಥೆಯ ಕಮಿಟಿಯವರು ಯಾವುದೇ ಸಭೆ ಕರೆಯದೇ ತಮ್ಮದೇ ಆದ ನಿರ್ಣಯ ತೆಗೆದುಕೊಂಡು ಅಧಿಕಾರ ನಡೆಸುತ್ತಿದ್ದಾರೆ ಎಂದರು.
ಸಂಸ್ಥೆಯ ಹಣ ದುರ್ಬಳಕೆ ಮಾಡಿಕೊಂಡು ಕಾನೂನು ಬಾಹಿರವಾಗಿ ಸಂಸ್ಥೆಯ ಕಮಿಟಿ ನೊಂದಣಿಗಾಗಿ ಎಲ್ಲ ಸದಸ್ಯರ ಒಮ್ಮತವಿಲ್ಲದೆ ಗದಗ ಜಿಲ್ಲಾ ವಕ್ಫ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ನಮ್ಮ ಆಕ್ಷೇಪಣೆಯಿದ್ದು, ಸದರಿ ಅರ್ಜಿಯನ್ನು ತಡೆಹಿಡಿದು ಸಂಸ್ಥೆಯ ಎಲ್ಲಾ ಸದಸ್ಯರ ಒಪ್ಪಿಗೆ ಪಡೆದ ನಂತರವೇ ಸಂಸ್ಥೆಯ ಕಮಿಟಿಯನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುನೀರ ಢಾಲಾಯತ, ಶೌಕತ ಕಾಗದಗಾರ, ಜಿಲಾನಿ ಢಾಲಾಯತ, ಮಾಬುಸಾಬ ಮುಳಗುಂದ, ಹಿದಾಯತ ಕಾಗದಗಾರ, ನೂರ ಕಾಗದಗಾರ ಸೇರಿದಂತೆ ಗುರು-ಹಿರಿಯರು, ಸದಸ್ಯರು ಉಪಸ್ಥಿತರಿದ್ದರು.



