ಮಳೆ ಹಾನಿಗೆ ಪರಿಹಾರ ನೀಡಲು ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಅತಿವೃಷಿಯಿಂದ ಕೊಳೆತು ಹಾಳಾಗುತ್ತಿದ್ದು, ಬೆಳೆವಿಮೆ ಮತ್ತು ಬೆಳೆ ಪರಿಹಾರ ದೊರಕಿಸಿಕೊಡಬೇಕೆಂದು ಭಾರತೀಯ ಕಿಸಾನ್ ಸಂಘದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ಶಂಕರಗೌಡ ಪಾಟೀಲ, 2025ರಲ್ಲಿ ಬಿತ್ತನೆ ಮಾಡಿದ ಬೆಳೆಗಳು 70ರಿಂದ 80 ದಿವಸಗಳ ಅವಧಿಯ ಬೆಳೆಗಳಾಗಿದ್ದು, ಹೆಸರು, ಮೆಕ್ಕೆಜೋಳ, ಬಿಟಿ ಹತ್ತಿ, ಶೇಂಗಾ, ಎಳ್ಳು, ಸೊಯಾಬಿನ್ ಸೇರಿದಂತೆ ಅನೇಕ ಬೆಳೆಗಳು ಕಟಾವು ಹಂತಕ್ಕೆ ಬಂದಿದ್ದವು. ಇದೀಗ ಸತತ ಮಳೆಯಿಂದ ಬೆಳೆಗಳು ಹಾನಿಗೀಡಾಗಿವೆ. ಆದ್ದರಿಂದ ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಮೇಶ ಕೋಳಿವಾಡ, ಚನ್ನಪ್ಪ ಷಣ್ಮುಖಿ, ಸಂಜೀವ ಹುಡೇದ, ವಿಜಯಕುಮಾರ ಅಡವಿ, ವೀರನಗೌಡ ಪಾಟೀಲ, ಅವರೆಡ್ಡಿ ಗುತ್ತಲ, ಚನ್ನಬಸಪ್ಪ ಹಾವೇರಿ, ಮಲ್ಲಿಕಾರ್ಜುನ ಪಾಟೀಲ, ಶಿವಲಿಂಗಪ್ಪ ಕೋಡಿ, ಶಿವಪ್ಪ ಹತ್ತಿಕಾಳ, ಸಂಗಪ್ಪ ನಂದಗಾವಿ, ರಾಮನಗೌಡ ಪಾಟೀಲ, ಚಂದ್ರಶೇಖರ ಬೂದಿಹಾಳ, ಅಶೋಕ ಮುಳಗುಂದ, ಬಸವರಾಜ ಮಲಿಗೋಡ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here