HomeGadag Newsಬೆಳೆ ಪರಿಹಾರ ಕೊಡುವಂತೆ ಮನವಿ

ಬೆಳೆ ಪರಿಹಾರ ಕೊಡುವಂತೆ ಮನವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಸತತವಾಗಿ 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಬೆಳೆಗಳು ಹಾನಿಯಾಗುತ್ತಿವೆ. ಆದ್ದರಿಂದ ವಿಮಾ ಕಂಪನಿಯವರು ರೈತರಿಗೆ ಬೆಳೆ ವಿಮೆ ಹಾಗೂ ಮಧ್ಯಂತರ ಬೆಳೆ ವಿಮಾ ಹಣವನ್ನು ಪಾವತಿ ಮಾಡಬೇಕೆಂದು ರೈತ ಹಿತಾಭಿವೃದ್ಧಿ ಸಂಘದ ವತಿಯಿಂದ ನಗರದ ಒಕ್ಕಲಗೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತೆರಳಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿಯವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಸಂಘದ ಕಾರ್ಯದರ್ಶಿ ಪರಮೇಶ್ವರಪ್ಪ ಪರಪ್ಪ ಜಂತ್ಲಿ ಮಾತನಾಡಿ, ಅಧಿಕ ಮಳೆಯಿಂದಾಗಿ ಬಿತ್ತಿದ ಬೆಳೆಗಳು ಕೊಳೆರೋಗ, ಕೀಟಬಾಧೆಗೆ ತುತ್ತಾಗಿವೆ. ಎಲ್ಲ ಬೆಳೆಗಳಿಗೂ ಸರ್ಕಾರ ಬೆಳೆ ಹಾನಿ ಕೊಡಬೇಕು ಮತ್ತು ಎಲ್ಲಾ ರೈತರಿಗೆ ಮಧ್ಯಂತರ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಸಪ್ಪ ಕಲಬಂಡಿ, ಕಳಕಪ್ಪ ರೇವಡಿ, ಮಂಜುನಾಥ್ ಕೋಳಿವಾಡ, ಮುತ್ತಣ್ಣ ಜೆಡಿ, ಮಂಜುನಾಥ್ ಹಿತ್ತಲಮನಿ, ವಿರೂಪಾಕ್ಷಪ್ಪ ಅಕ್ಕಿ, ಈಶ್ವರಪ್ಪ ಗುಜಮಾಗಡಿ, ಬಸವರಾಜ ಕವಳಿಕಾಯಿ, ಕರಬಸಯ್ಯ ನಲ್ವಾತವಾಡಮಠ, ರವಿ ಹುಡೇದ, ಬಸವರಾಜ್ ಹುಬ್ಬಳ್ಳಿ, ಮಂಜುನಾಥ ಮಂದಾಲಿ, ಉಮೇಶ ಲಿಂಗರೆಡ್ಡಿ (ಹೊಂಬಳ) ಶರಣ್ಣಪ್ಪ (ಕದಡಿ) ಪಕೀರಗೌಡ ಪಾಟೀಲ್ (ಚಿಕ್ಕ ಹಿರೆಹಂದಿಗೋಳ) ಬಸವರಾಜ ದೊಡೆಪ್ಪನವರ (ಕದಡಿ), ಗದಗ ರೈತ ಸಂಘದ ಅಧ್ಯಕ್ಷ ಬಸವರಾಜ್ ಕವಳಿಕಾಯಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!