ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗಿದ್ದರಿಂದ ರೈತರಿಗೆ ನಷ್ಟವಾಗಿದ್ದು, ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಗದಗ ಜಿಲ್ಲಾಧ್ಯಕ್ಷ ಮುತ್ತನಗೌಡ ಭ.ಚೌಡರಡ್ಡಿ ನೇತೃತ್ವದಲ್ಲಿ ರೈತರು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಮುತ್ತನಗೌಡ ಚೌಡರೆಡ್ಡಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಎಲ್ಲ ತಾಲೂಕಗಳ ರೈತರು ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಖರ್ಚು ಮಾಡಿದ್ದು, ಅತಿವೃಷ್ಟಿಯಿಂದ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ರೈತರು ಅಪಾರ ನಷ್ಟವನ್ನು ಅನುಭವಿಸುತ್ತಿದ್ದಾರೆ. ರೈತರು ಬಹಳ ಸಂಕಷ್ಟದಲ್ಲಿದ್ದು, ಶೀಘ್ರವಾಗಿ ರೈತರಿಗೆ ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಗಣ್ಣ ದಂಡಿನ, ಅಶೋಕ ಹಿರೇಮಠ, ಎಸ್.ಎಮ್. ಪರಡ್ಡಿ, ಸಂಗಣ್ಣ ಪವಾಡಶೆಟ್ಟಿ, ಮೇಘರಾಜ ಭಾವಿ, ಧರ್ಮಣ್ಣ ಬೂಸಗೌಡರ, ಬಸವರಾಜ ಹೊಸಮನಿ, ಚಂದ್ರಶೇಖರಯ್ಯ ವಸ್ತ್ರದ, ಸಂಪತಕುಮಾರ ಅಮರನಾಥ, ಮಹೇಶ ಹಿರೇಮಠ, ಎಂ.ಎಸ್. ಹಡಪದ ಮುಂತಾದವರು ಉಪಸ್ಥಿತರಿದ್ದರು.


