ಗದಗ: ವೋಲ್ವೋ ಬಸ್ ಪುನಃ ಆರಂಭಿಸುವಂತೆ ಟೀಂ ಇಂಡಿಯಾದ ಮಾಜಿ ಆಟಗಾರ, ಸ್ಪಿನ್ ಮಾಂತ್ರಿಕ ಸುನೀಲ್ ಜೋಶಿ ಟ್ವೀಟ್ ಮೂಲಕ ಮನವಿ ಮಾಡಿದ್ದರು. ಬೆಂಗಳೂರಿನಿಂದ ಗದಗ ನಗರಕ್ಕೆ ವೋಲ್ವೋ ಬಸ್ ಪುನರಾರಂಭಗೊಳಿಸುವಂತೆಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ಅವರಿಗೆ ಎಕ್ಸ್ ನಲ್ಲಿ ಟ್ಯಾಗ್ ಮಾಡುವ ಮೂಲಕ ಜೋಷಿ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಸಾರಿಗೆ ನಿಯಂತ್ರಣಾಧಿಕಾರಿ ಡಿ.ಎಂ ದೇವರಾಜು, ಗದಗ- ಬೆಂಗಳೂರು ವೋಲ್ವೋ ಬಸ್ ಸಂಚಾರ ನಮ್ಮ ವ್ಯಾಪ್ತಿಯಲ್ಲಿ ಇಲ್ಲ, ನಮ್ಮಲ್ಲಿ ವೋಲ್ವೋ ಬಸ್ ಕೂಡ ಇಲ್ಲ. ಅದನ್ನು KSRTC ವೋಲ್ವೋ ಬಸ್ ಓಡಿಸಬೇಕು ಎಂದರು.
ಈ ಮೊದಲು ಬೆಂಗಳೂರು ಕೆಎಸ್ಆರ್ಟಿಸಿ ಅವರು ಗದಗಗೆ ವೋಲ್ವೋ ಬಸ್ ಓಡಿಸಿದ್ದರು. ಆಗ ಆದಾಯ ಪ್ರಮಾಣ ಬಂದಿಲ್ಲ ಎಂದು ಸ್ಥಗಿತ ಮಾಡಿದ್ದಾರೆ. ಬಳಿಕ ಗದಗದಿಂದ ಎಸಿ ರಹಿತ ಸ್ಲೀಪರ್ ಓಡಿಸುತ್ತಿದ್ದೇವು. ಎರಡು ತಿಂಗಳಿಂದ ಬಸ್ ಸೋರುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಸ್ಥಗಿತ ಮಾಡಲಾಗಿದೆ. ಕೇಂದ್ರ ಕಚೇರಿ ಅನುಮತಿ ಪಡೆದು ರಿಪೇರಿಗೆ ಕಳಿಸಲಾಗಿದೆ. ಈಗ ರಿಪೇರಿ ಆಗಿ ಬಂದಿದೆ ಎಂದು ಹೇಳಿದರು.
ಇನ್ನು ಪಲ್ಲಕ್ಕಿ ಬಸ್ ನೀಡುವಂತೆ ಮನವಿ ಮಾಡಿದ್ದೇವೆ. ಎರಡು ಬಸ್ ನೀಡುವುದಾಗಿ ಹೇಳಿದ್ದಾರೆ. ಎಸಿ ರಹಿತ ಬಸ್ 10 ಲಕ್ಷ ಕಿಲೋಮೀಟರ್ ಓಡಿವೆ. ಬೆಂಗಳೂರು ಟು ಗದಗ ವೋಲ್ವೋ ಬಸ್ ಓಡಿಸಲು ಕೇಂದ್ರ ಕಚೇರಿಗೆ ಮನವಿ ಮಾಡುತ್ತೆವೆ. ಆದರೆ, ಗದಗ ಡಿಪೋದಿಂದ ವೋಲ್ವೋ ವ್ಯವಸ್ಥೆ ಇಲ್ಲ ಎಂದು ಸ್ಪಷ್ಟಪಡಿಸಿದರು.