ವಿಜಯಸಾಕ್ಷಿ ಸುದ್ದಿ, ಗದಗ : ದೇಶದ ಪ್ರತಿಷ್ಠಿತ ಮೆಣಸಿನಕಾಯಿ ಮಾರುಕಟ್ಟೆಯಾದ ಬ್ಯಾಡಗಿಯಲ್ಲಿ, ಬೆಲೆ ಕುಸಿತದಿಂದ ಆದ ಗಲಾಟೆಯಲ್ಲಿ ಅಮಾಯಕ ರೈತರ ಮೇಲೆ ಕೇಸ್ ದಾಖಲಿಸಿ ವಿಚಾರಣೆ ನೆಪದಲ್ಲಿ ರೈತರಿಗೆ ಮಾನಸಿಕ ಹಿಂಸೆ ನೀಡಬಾರದು ಹಾಗೂ ಅವರ ಮೇಲೆ ಯಾವುದೇ ರೀತಿಯ ಕೇಸ್ ದಾಖಲು ಮಾಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ವರ್ತಕರು 1 ತಿಂಗಳ ಕಾಲ ಮಾರುಕಟ್ಟೆ ಬಂದ್ ಇರುತ್ತದೆ ಎಂದು ಹೇಳಿದ್ದಾರೆ. ಅದಕ್ಕೆ ಜಿಲ್ಲೆಯ ರೈತ ಬಳಿ ಇನ್ನೂ ಮೆಣಸಿನಕಾಯಿ ಇದ್ದು, ಬೆಲೆ ಕುಸಿತದಿಂದ ಮಾರಾಟ ಮಾಡಿದೆ ಇಟ್ಟುಕೊಂಡಿದ್ದಾರೆ. ಪುನಃ ಮಾರುಕಟ್ಟೆಯಲ್ಲಿ ವ್ಯಾಪಾರ ಪ್ರಾರಂಭ ಮಾಡಬೇಕು ಹಾಗೂ ವ್ಯಾಪಾರಸ್ಥರ ಮೇಲೆ ಹದ್ದಿನ ಕಣ್ಣಿಟ್ಟು ಟ್ರೇಡರ್ ಪ್ರಕ್ರಿಯೆಯಲ್ಲಿ ರೈತರಿಗೆ ಯಾವುದೇ ಮೋಸ ಮಾಡದೆ ಉತ್ತಮ ಬೆಲೆಗೆ ಖರೀದಿ ಮಾಡುವಂತೆ ಸಂಬಂಧಪಟ್ಟ ಎಪಿಎಂಸಿ ಅಧಿಕಾರಿಗಳು ನೋಡಿಕೊಳ್ಳಬೇಕು. ಅನ್ಯ ರಾಜ್ಯದ ಮೆಣಸಿನಕಾಯಿ ಮಾರುಕಟ್ಟೆಗೆ ಬರದಂತೆ ತಡೆದರೆ ನಮ್ಮ ಜಿಲ್ಲೆಯ ರೈತರಿಗೆ ಉತ್ತಮ ಬೆಲೆ ಸಿಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.