ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮುಳಗುಂದ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಹೊರ ವಲಯದಲ್ಲಿ ಅಲ್ಲಲ್ಲಿ ಚಿರತೆಯ ಹಾವಳಿಯಿಂದ ರೈತರು ಹಾಗೂ ಸಾರ್ವಜನಿಕರು ಭಯದಿಂದ ಕಾಲ ಕಳೆಯುತ್ತಿದ್ದು, ಅರಣ್ಯ ಅಧಿಕಾರಿಗಳು ಹಾಗೂ ಆರಕ್ಷಕ ಠಾಣೆಯ ಸಿಬ್ಬಂದಿಗಳ ಸಹಕಾರದಿಂದ ಚಿರತೆಯನ್ನು ಹಿಡಿಯಲು ಮುಂದಾಗಬೇಕು ಎಂದು ಮುಳಗುಂದ ಬಿಜೆಪಿ ಮಾಹಾಶಕ್ತಿ ಕೇಂದ್ರದಿಂದ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.
Advertisement
ಮುಳಗುಂದ ಮಾಹಾಶಕ್ತಿ ಕೇಂದ್ರದ ಅಧ್ಯಕ್ಷ ಮಾಹಾಂತೇಶ ಬಾತಾಖಾನಿ, ಎಂ.ಡಿ. ನರಗುಂದ, ಮಲ್ಲಪ್ಪ ಬಳ್ಳಾರಿ, ದೇವಪ್ಪ ನೀಲಗುಂದ, ಮಂಜುನಾಥ ಮಜ್ಜಿಗುಡ್ಡ, ಮೋಹನ ಮದ್ದಿನ, ಪ್ರಭು ಕಳ್ಳಿಮನಿ, ಕಿರಣ ಬಾತಾಖಾನಿ, ವೀರೇಶ ಅಕ್ಕಿ, ಮಂಜುನಾಥ ಕುಂಬಾರ, ಸಂತೋಷ ಬಳ್ಳಾರಿ, ಠ್ಯಾನಪ್ಪ ಕಾಳೆ ಇದ್ದರು.