ವಿಜಯಸಾಕ್ಷಿ ಸುದ್ದಿ, ಗದಗ: ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಂ ಜಯಂತಿಗಳನ್ನು ಹಿಂದುಳಿದ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುವ ಮೂಲಕ ವಿಶೇಷವಾಗಿ ಆಚರಣೆ ಮಾಡುವಂತೆ ಜೈ ಭೀಮ ದಲಿತ ರಕ್ಷಣಾ ವೇದಿಕೆಯ ಗದಗ ಜಿಲ್ಲಾಧ್ಯಕ್ಷ ಅಶೋಕ ಎಂ.ಹಾದಿಮನಿ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ವರ್ಷದಲ್ಲಿ ಎಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಎಪ್ರಿಲ್ 5ರಂದು ಡಾ. ಬಾಬು ಜಗಜೀವನರಾಮ ಜಯಂತಿ ಇದ್ದು, ಈ ಇಬ್ಬರು ಮಹಾನಾಯಕರು ಶೋಷಿತ ಸಮುದಾಯದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಇವರುಗಳು ಜಯಂತಿಗಳನ್ನು ವಿಶೇಷವಾಗಿ ಆಚರಿಸಬೇಕು. ಗದಗ ಜಿಲ್ಲೆಯಲ್ಲಿರುವ ಪ್ರತಿ ತಾಲೂಕಿನ ಒಂದು ಹಿಂದುಳಿದ ಗ್ರಾಮವನ್ನು ದತ್ತು ತೆಗೆದುಕೊಂಡು ಮೂಲಭೂತ ಸೌಕರ್ಯಗಳು, ಶಾಲೆಗಳ ದುರಸ್ಥಿ, ಗಟಾರ, ಬೀದಿದೀಪ, ಸ್ವಚ್ಛತೆ ಕಾರ್ಯಕ್ರಮಗಳನ್ನು ಕೈಗೊಂಡು, ಗ್ರಾಮದ ದಲಿತ ಸಮುದಾಯದ ಯುವಕ, ಯುವತಿಯರಿಗೆ ಶಿಕ್ಷಣ ಮತ್ತು ಕಾನೂನು ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಓಬಳೇಶ ಯಶವಂತಪುರ, ಬಸವರಾಜ ದಾನಸೂರ ಉಪಸ್ಥಿತರಿದ್ದರು.