ವಿಜಯಸಾಕ್ಷಿ ಸುದ್ದಿ, ಮುಳಗುಂದ: ಡಿ.10 ರಂದು ಬೆಳಗಾವಿಯ ವಿಧಾನಸೌಧದ ಮುಂಭಾಗದಲ್ಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ಪಂಚಮಸಾಲಿ ಸಮಾಜದ ಹೋರಾಟಗಾರರ ಮೇಲೆ ಪೊಲೀಸ್ ಅಧಿಕಾರಿಗಳು ಲಾಠಿ ಚಾರ್ಜ್ ಮಾಡಿದ್ದು ಖಂಡನಿಯ. ಕೂಡಲೇ ಲಾಠಿ ಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಮುಳಗುಂದ ಬಿಜೆಪಿ ಮಾಹಾಶಕ್ತಿ ಘಟಕದ ವತಿಯಿಂದ ಪ.ಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಅವರಿಗೆ ಮನವಿ ಸಲ್ಲಿಸಿದರು.
Advertisement
ಈ ಸಂದರ್ಭದಲ್ಲಿ ಬಿಜೆಪಿ ಮಾಹಾಶಕ್ತಿ ಕೇಂದ್ರದ ಅಧ್ಯಕ್ಷ ಮಾಹಾಂತೇಶ ಬಾತಾಖಾನಿ, ಸಿ.ಎಸ್. ಪತ್ರಿ, ಎಂ.ಪಿ. ಮಜ್ಜಿಗುಡ್ಡ, ಎಂ.ಎಸ್. ಬಳ್ಳಾರಿ, ಎಂ.ಡಿ. ನರಗುಂದ, ಶಿದ್ದರಾಮಯ್ಯ ಹಿರೇಮಠ, ಎ.ಎನ್. ಬಾತಾಖಾನಿ, ಕೆ.ಎನ್. ಬಾತಾಖಾನಿ, ಲಕ್ಷ್ಮಣ ಇಂಗಳಹಳ್ಳಿ, ಚಂದ್ರಪ್ಪ ಕಾಳೆ, ಮೋಹನ ಮದ್ದಿನ, ತಿಪ್ಪಣ್ಣ ಬಂಡಿ, ಮಲ್ಲಿಕಾರ್ಜುನ ಉಜ್ಜಣ್ಣವರ, ವೀರೇಶ ಅಕ್ಕಿ, ಸಿದ್ದು ಅಕ್ಕಿ, ಶರಣಪ್ಪ ಬಂಗಾರಿ ಇದ್ದರು.