ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ವಾರ್ಡ್ ನಂ. 1 ರ ಅಶ್ವಿನಿ ನಗರದಲ್ಲಿನ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಕೂಡಲೇ ಚರಂಡಿ ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರು ಪಟ್ಟಣ ಪಂಚಾಯತಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆನಂದ ಜಾಧವ, ಮೋಹನ ರಸಾಳಕರ, ಮಹೇಶ ಹುಲಿ, ಬಸವರಾಜ ನಿಂಗೋಜಿ, ಗೀತಾ ಜಾಧವ, ರಾಮಣ್ಣ ಕಮಾಜಿ, ಮಂಜುನಾಥ ಲಾಳಿ, ಶೇಖಪ್ಪ ಸಿದ್ದನಗೌಡರ, ಮಾಹಾಂತೇಶ ಜಾಧವ ಇದ್ದರು.



