ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶೇಂಗಾ, ಗೋವಿನಜೋಳ ಬೆಳೆಗೆ ಮಂಗಗಳ ಹಾವಳಿ ಹೆಚ್ಚಾಗಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಅರಣ್ಯ ವಲಯ ವ್ಯಾಪ್ತಿಯ ಶೆಟ್ಟಿಕೆರೆ, ಛಬ್ಬಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳೆದ ನಿಂತ ಬೆಳೆಗಳು ಅತಿವೃಷ್ಟಿಯಿಂದ ಹಾನಿಗೀಡಾಗಿದೆ. ಇನ್ನೊಂದೆಡೆ ಮಂಗಗಳ ಉಪಟಳದಿಂದಾಗಿ ಅಳಿದುಳಿದ ಬೆಳೆಗಳೂ ಸಹ ನಾಶವಾಗುತ್ತಿವೆ. ದೊಡ್ಡ ದೊಡ್ಡ ಹಿಂಡುಗಳೊಂದಿಗೆ ಆಗಮಿಸುವ ಮಂಗಗಳು ಶೇಂಗಾ ಬೆಳೆಯನ್ನು ಕಿತ್ತು ತಿಂದು ಹಾಳು ಮಾಡುತ್ತಿವೆ.
ಇದರಿಂದ ಬೇಸತ್ತಿರುವ ರೈತ ಸಮುದಾಯ ಮಂಗಗಳ ಹಾವಳಿಯನ್ನು ನಿಯಂತ್ರಿಸುವಂತೆ ಬಟ್ಟೂರ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳಿಗೆ ಮನವಿ ಮಾಡಿದ್ದಾರೆ. ಆದರೆ ಯಾರೂ ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.



