ವಿಜಯಸಾಕ್ಷಿ ಸುದ್ದಿ, ಗದಗ: ವಿಧಾನ ಪರಿಷತ್ ಸದಸ್ಯರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ತಾಲೂಕಿನ ಅಡವಿಸೋಮಾಪುರ ಗ್ರಾಮದ ಗೋಣಿ ಬಸವೇಶ್ವರ ದೇವಸ್ಥಾನದ ಹತ್ತಿರ ಗ್ರಾಮದ ಗುರು-ಹಿರಿಯರು ಯುವಕರು ಸ್ವಾಗತಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಕಮಿಟಿ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ಜಡಿ ಮಾತನಾಡಿ, ಗ್ರಾಮದಲ್ಲಿ ಗೋಣಿ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ವಿಶೇಷ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಕಮಿಟಿಯ ಗೌರವಾಧ್ಯಕ್ಷ ಆನಂದಪ್ಪ ಪುರದ, ಅಧ್ಯಕ್ಷ ಲೆಂಕೆಪ್ಪ ಹೊಸಳ್ಳಿ, ಈರಪ್ಪ ದೊಡಮನಿ, ಸಂಗಪ್ಪ ಯೋಗಿ, ಹುಚ್ಚಿರಪ್ಪ ಹರ್ತಿ, ಅಂಬರೀಶ ಜಕ್ಕಮ್ಮನವರ, ರಮೇಶ ಹಂಡಿ, ಬೂದಪ್ಪ ರೂಡನವರ, ಜಾವೇದ್ ಮಿಶ್ರಿಕೋಟಿ, ಮಲ್ಲಪ್ಪ ಹೊಸಳ್ಳಿ, ಈರಪ್ಪ ಹರ್ತಿ, ಮಂಜುನಾಥ ನಾಗಾವಿ, ಸಿದ್ದಪ್ಪ ಸಿದ್ನೆಕೊಪ್ಪ, ಮಲ್ಲಪ್ಪ ಹಳ್ಳಿಕೇರಿ, ಮುತ್ತಪ್ಪ ಸೋಮನಕಟ್ಟಿ, ಮಹೇಶ ಹರ್ಲಾಪೂರ, ಹೇಮಣ್ಣ ಹೊಸಳ್ಳಿ, ಗೋಣೇಪ್ಪ ದುರ್ಗಣ್ಣವರ, ಮಲ್ಲಪ್ಪ ತಳವಾರ, ಅರವಿಂದಪ್ಪ ಚಕ್ರಣ್ಣವರ, ರಫೀಕ್ ಮುಲ್ಲಾನವರ, ಪರಶುರಾಮ ಜಡಿ ಮುಂತಾದವರು ಉಪಸ್ಥಿತರಿದ್ದರು.