ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಮದ್ಯ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ರಾಜ್ಯದ ಎಲ್ಲ ವರ್ಗದ ಸನ್ನುದಾರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಶಂಕರ ಹಾನಗಲ್, ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ. 20 ಲಾಭಾಂಶ ನೀಡುವದು, ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡುವದಷ್ಟೇ ಅಲ್ಲದೆ, ಸನ್ನದು ಆವರಣದಲ್ಲಿ ನಿಗದಿಪಡಿಸಿದ ನಿರ್ದಿಷ್ಟ ಸ್ಥಳ ಮತ್ತು ಮೊದಲೇ ತಯಾರಿಸಿದ ಆಹಾರಗಳನ್ನು ನೀಡಲು ಅವಕಾಶ ಮಾಡಿಕೊಡುವುದರಿಂದ ಬಡವರ್ಗದ ಗ್ರಾಹಕರಿಗೆ ಸಹಾಯವಾಗುತ್ತದೆ ಎಂದರು.
ಇದರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನ ಮಾಡುವುದನ್ನು ತಡೆಗಟ್ಟುವ ಹಾಗೂ ಕಾಯ್ದೆ ಉಲ್ಲಂಘನೆ ತಡೆಯಬಹುದಾಗಿದೆ ಎಂದು ಸಂಘದ ಪದಾಧಿಕಾರಿಗಳು ಹೇಳಿದರಲ್ಲದೆ, ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಶಂಕರ ಹಾನಗಲ್, ಕಾರ್ಯಾಧ್ಯಕ್ಷ ಸಲೀಮ್ ಮೇಗಲಮನಿ, ಉಪಾಧ್ಯಕ್ಷ ಎಸ್.ಎಸ್. ಗೋಟೂರ, ಆಯ್.ಕೆ. ಹೊಸಮಠ, ಕಾರ್ಯದರ್ಶಿ ಮಂಜುನಾಥ ಆರ್. ಕಬಾಡಿ, ವಿಠ್ಠಲ ಎಮ್.ಖಟವಟೆ, ಸಹ ಕಾರ್ಯದರ್ಶಿ ಮಂಜು ಕಲಾಲ, ಆನಂದ ಎಸ್.ಚವ್ಹಾಣ, ಅಶೋಕ ಬೇವಿನಕಟ್ಟಿ, ಸುದರ್ಶನ ಹಾನಗಲ್, ನಾರಾಯಣ ಪವಾರ, ವಿನಾಯಕ ಕಬಾಡಿ, ವಿನಾಯಕ ನೆಲವಗಿ, ಮಹಾಂತೇಶ ಕಲಾಲ, ಲಿಂಗರಾಜ ಎಸ್.ಕೆ., ಎಸ್.ಎಫ್. ಕಬಾಡಿ, ಎಮ್.ಡಿ. ಹಬೀಬ, ರಾಘವೇಂದ್ರ ಕಲಾಲ, ಪಿ.ಜಿ. ಬದಿ, ವಿಕಾಸ ಚವ್ಹಾಣ, ದಯಾ ಪವಾರ, ಲೋಹಿತ ನೆಲವಗಿ, ಸುಧಾಕರ ಗೋಟೂರ, ಕುಮಾರ ಚಿತ್ರಗಾರ, ರವಿ ಹೊಸಪೇಟೆ ಸೇರಿದಂತೆ ಮುಂಡರಗಿ, ಶಿರಹಟ್ಟಿ, ರೋಣ, ನರಗುಂದ, ಗಜೇಂದ್ರಗಡ, ಗದಗ ಜಿಲ್ಲಾಮಟ್ಟದ ಸನ್ನದುದಾರರು ಉಪಸ್ಥಿತರಿದ್ದರು.


