ವಿಜಯಸಾಕ್ಷಿ ಸುದ್ದಿ, ಗದಗ: ಗಜೇಂದ್ರಗಡದಲ್ಲಿ ಕುಮಾರಿ ಖುಷಿ ರಂಗರೇಜ್ ಸಾ ಆತ್ಮಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರಿಗೆ ಗದಗ ಎಸ್‌ಎಸ್‌ಕೆ ಸಮಾಜದ ಪಂಚ ಕಮಿಟಿ ವತಿಯಿಂದ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
Advertisement
ಗದಗ ಎಸ್‌ಎಸ್‌ಕೆ ಸಮಾಜ ಅಧ್ಯಕ್ಷ ಫಕೀರಸಾ ಭಾಂಡಗೆ, ಗೌರವ ಕಾರ್ಯದರ್ಶಿ ವಿನೋದ್ ಶಿದ್ಲಿಂಗ ಮನವಿ ಓದಿದರು. ಈ ಸಂದರ್ಭದಲ್ಲಿ ಗದಗ ಎಸ್‌ಎಸ್‌ಕೆ ಪಂಚ ಕಮಿಟಿ ಪದಾಧಿಕಾರಿಗಳಾದ ಸುರೇಶ ಕುಮಾರ ಬದಿ, ಪ್ರಕಾಶ ಬಾಕಳೆ, ಶ್ರೀನಿವಾಸ್ ಭಾಂಡಗೆ, ಪರಶುರಾಮ್ ಬದಿ, ಮಾರುತಿ ಪವಾರ, ಗದಗ ಸಮಾಜದ ಮುಖಂಡ ಜವಾಹರ್ ಖೋಡೆ, ಹುಬ್ಬಳ್ಳಿ ಸಮಾಜದ ಅಧ್ಯಕ್ಷ ಸತೀಶ್ ಮೆಹರವಾಡೆ ಹಾಗೂ ಪದಾಧಿಕಾರಿಗಳು ಹಾಜರಿದ್ದರು.