ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ಕೆಲವು ಜಿಲ್ಲೆಗಳಲ್ಲಿ ಹೇರಿರುವ ನಿಷೇಧವನ್ನು ಹಿಂಪಡೆಯುವಂತೆ ಆಗ್ರಹಿಸಿ ಶಿರಹಟ್ಟಿ ತಾಲೂಕಾ ಹಿಂದೂಪರ ಸಂಘಟನೆಗಳ ಒಕ್ಕೂಟದ ಮೂಲಕ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾಧ್ಯಕ್ಷ ಸಂತೋಷ ಕುರಿ, ನಾಡಿನ ಹಿರಿಮೆಗೆ ಗುರುವಿನ ಮಹಿಮೆ ಅಪಾರವಾದದ್ದು. ಶ್ರೇಷ್ಠ ಸಂತ ಕಾಡಸಿದ್ದೇಶ್ವರ ಸ್ವಾಮೀಜಿಗಳು ಗೋಶಾಲೆ, ಅನಾಥಾಶ್ರಮಗಳು, ವಯೋವೃದ್ಧರಿಗೆ ಆರೋಗ್ಯ, ಅನಾಥ ಮಕ್ಕಳಿಗೆ ಊಟ, ವಸತಿ, ಶಿಕ್ಷಣ, ಗುರುಕುಲ ಹಾಗೂ ಸಾವಯವ ಕೃಷಿಯ ಮೂಲಕ ದೇಶದ ಕೃಷಿಕ ಸಂಪತ್ತನ್ನು ಶ್ರೀಮಂತಗೊಳಿಸಿದ್ದಾರೆ. ಶ್ರೀಗಳಿಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರವೇಶ ನಿರ್ಬಂಧಿಸಿರುವುದು ಸೂಕ್ತವಲ್ಲ. ಈ ಕೂಡಲೇ ಸದರಿ ಕಾನೂನು ಬಾಹಿರ ನಿರ್ಬಂಧವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪರಶುರಾಮ ಡೊಂಕಬಳ್ಳಿ, ವೀರಣ್ಣ ಅಂಗಡಿ, ಶಶಿಕುಮಾರ ಪೂಜಾರ, ಅರುಣಕುಮಾರ ತಿರ್ಲಾಪೂರು, ಬಸವರಾಜ ಕಲ್ಯಾಣಿ, ಪ್ರಕಾಶ ಶೇಳಕೆ, ಆನಂದ ಸ್ವಾಮಿ, ರವಿ ಜಾಧವ, ದೇವಪ್ಪ ಪೂಜಾರ, ಸಂತೋಷ ತೋಡೆಕರ ಮುಂತಾದವರು ಉಪಸ್ಥಿತರಿದ್ದರು.



