ಮೂಲಭೂತ ಸೌಕರ್ಯ ಒದಗಿಸಲು ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿಯ 35ನೇ ವಾರ್ಡ್ನಲ್ಲಿ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಿಗೆ 35ನೇ ವಾರ್ಡಿನ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

Advertisement

ಹಿರಿಯರಾದ ಜಯಣ್ಣ ಶೆಟ್ಟರ್ ಮತ್ತು ಪ್ರಶಾಂತ ನಾಯ್ಕರ ಮಾತನಾಡಿ, ಗದಗ-ಬೆಟಗೇರಿ ನಗರಸಭೆಯ ವಾರ್ಡ್ ನಂ. 35ರಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರು ಸೂಕ್ತವಾಗಿ ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರನ್ನು ರಾತ್ರಿಯ ಹೊತ್ತು ಬಿಡಲಾಗುತ್ತಿದ್ದು, ಬೆಳಿಗ್ಗೆ 6 ಗಂಟೆಯಿAದ ರಾತ್ರಿ 8 ಗಂಟೆಯವರೆಗೆ ಕುಡಿಯುವ ನೀರು ಬಿಡಬೇಕು. ಅಲ್ಲದೆ, ವಾರ್ಡ್ನಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಯುಜಿಡಿ ಹಾಗೂ ಕಸ ವಿಲೇವಾರಿ, ಬೀದಿ ದೀಪ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳಿಂದ ಇಲ್ಲಿನ ನಾಗರಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಅರವಿಂದ ಜಿ.ಕೆಲೂರ, ಮಹೇಶ ದಾಸರ, ಪ್ರಶಾಂತದೇವ ನಾಯಕ, ರೇಖಾ ಬಂಗಾರಶೆಟ್ಟರ್, ಜಿ.ವಿ. ಮಳಲಿ, ವಿ.ಪಿ. ಸವಡಿ, ಸಚಿನ ಮಡಿವಾಳರ, ಪ್ರವೀಣ ಹಡಪದ, ಪ್ರಶಾಂತ ಚವಡಿ, ಪ್ರವೀಣ ಸವಣೂರ ಇನ್ನಿತರರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here