ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆಯಲ್ಲಿ ಎನ್‌ಆರ್‌ಎಲ್‌ಎಮ್ ಕಾರ್ಯಕ್ರಮದ ಸಿಬ್ಬಂದಿ ಮೂಲಕ ಹಾಗೂ ಪಿ.ಜಿ ಗುಂಪುಗಳ ಮೂಲಕ ರೈತರಿಂದ ಕಡಲೆಯನ್ನು ಖರೀದಿಸಿ ಮಾಡಿಸಿ ಇನ್ನೂ ಬರಬೇಕಾದ 270 ಕೋಟಿ ರೂ. ಬಾಕಿ ಹಣವನ್ನು 6 ತಿಂಗಳಾದರೂ ರೈತರಿಗೆ ಪಾವತಿಸದೆ ಸತಾಯಿಸುತ್ತಿರುವ ಕುರಿತು ಅಂತೂರ ಬೆಂತೂರ ರೈತರು ಲೋಕಾಯುಕ್ತರಿಗೆ ಮನವಿ ಸಲ್ಲಿಸಿದರು.
Advertisement
ಬರಗಾಲ ಇರುವುದರಿಂದ ಒಣ ಬೇಸಾಯವಾಗಿ ವರ್ಷಕ್ಕೆ ಒಂದೇ ಬೆಳೆ ಬಂದಿದ್ದು, ಆ ಬೆಳೆಯ ಖರೀದಿಯಲ್ಲಿಯೂ ಅವ್ಯವಹಾರ ನಡೆದಿದೆ. ಈ ಅನ್ಯಾಯವನ್ನು ಸರಿಪಡಿಸಿ ರೈತರಿಗೆ ನ್ಯಾಯ ಕೊಡಿಸಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸರಸ್ವತಿ ಸಂ.ಬೆಟಗೇರಿ, ಭುವನೇಶ್ವರಿ ಚ.ನರಗುಂದ, ಲಕ್ಷ್ಮಿ ಮ.ನಾಗಿಪುಡಿ, ಲಕ್ಷ್ಮಿ ಹಿತ್ತಲಮನಿ, ಗೀತಾ ಬಾಲಪ್ಪನವರು, ಶ್ಯಾಮಲಾ ಯ.ಕರೂರ, ಎಸ್.ಪಿ. ದಾಸರ ಸೇರಿದಂತೆ ಅನೇಕ ರೈತ ಮಹಿಳೆಯರು ಉಪಸ್ಥಿತರಿದ್ದರು.