ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಭಾನು ಮಾರ್ಕೆಟ್‌ನ ವಾಣಿಜ್ಯ ಸಂಕೀರ್ಣದ ಮೇಲಂತಸ್ತಿನ ಕಟ್ಟಡದಲ್ಲಿ ಖಾಲಿ ಇರುವ ಕೊಠಡಿಯನ್ನು ಬೀದಿ ಬದಿ ವ್ಯಾಪಾರಸ್ಥರ ಸಂಘದ ಕಾರ್ಯಾಲಯಕ್ಕೆ ಬಳಸಿಕೊಳ್ಳಲು ಕೊಡಬೇಕೆಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ ಅವರ ನೇತೃತ್ವದಲ್ಲಿ ಪುರಸಭೆಗೆ ಮನವಿ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ, ಮುಖ್ಯ ಬಜಾರ್‌ನಲ್ಲಿನ ಪುರಸಭೆ ವಾಣಿಜ್ಯ ಸಂಕೀರ್ಣದ ಮೇಲಂತಸ್ತಿನಲ್ಲಿ ಹಲವು ಕೊಠಡಿಗಳು ಖಾಲಿ ಇವೆ. ಬೀದಿ ಬದಿ ವ್ಯಾಪಾರಸ್ಥರ ಸಂಘಕ್ಕೆ ಇಲ್ಲಿರುವ ಕೊಠಡಿ ನೀಡಿದರೆ ಅನಕೂಲವಾಗುತ್ತದೆ. ಈಗಾಗಲೇ ಒಂದಷ್ಟು ಸಂಘಕ್ಕೆ ಕೊಠಡಿ ನೀಡಲಾಗಿದ್ದು, ನಮ್ಮ ಮನವಿ ಪುರಸ್ಕರಿಸಿ ಅವಕಾಶ ಕೊಡಬೇಕು. ಖಾಲಿ ಇರುವ ಕೊಠಡಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಕೊಳ್ಳುತ್ತೇವೆ ಎಂದು ಕೋರಲಾಗಿದೆ. ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಮಾಂತೇಶ ಬೀಳಗಿ, ತಮ್ಮ ಮನವಿಯನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದು ನಿರ್ಧರಿಸಲಾಗುವುದು ಎಂದರು.
ಈ ವೇಳೆ ಮುನೀರ ಸಿದ್ಧಾಪುರ, ಹನಮಂತಪ್ಪ ರಾಮಗೇರಿ, ಮೆಹಬೂಬ ಜಮಾಲಾಖಾನವರ, ಪರಶೂರಾಮ ಬಳ್ಳಾರಿ, ಸೋಮಪ್ಪ ಗೌರಿ, ಲಕ್ಷ್ಮಣ ಮುಳಗುಂದ, ಶಬ್ಬೀರ ಶಿರಹಟ್ಟಿ, ದಾದಪೀರ ಬೆಂಡಿಗೇರಿ ಮುಂತಾದವರಿದ್ದರು.