HomeGadag Newsಕಡಲೆ ಬೆಂಬಲ ಬೆಲೆ ಹೆಚ್ಚಿಸಲು ಮನವಿ

ಕಡಲೆ ಬೆಂಬಲ ಬೆಲೆ ಹೆಚ್ಚಿಸಲು ಮನವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಾದ್ಯಂತ ರೈತರು ಅಲ್ಪಸ್ವಲ್ಪ ಕಡಲೆ ಬೆಳೆದಿದ್ದಾರೆ. ಕಳೆದ ತಿಂಗಳ ಮಾರುಕಟ್ಟೆಯಲ್ಲಿ ಬೆಲೆ ಕ್ಟಿಂಟಲ್‌ಗೆ 6800-6900 ರೂಪಾಯಿ ಇತ್ತು. ಈಗ ದಿನದಿಂದ ದಿನಕ್ಕೆ ಕಡಲೆ ಬೆಲೆ ಕುಸಿಯುತ್ತಲಿದೆ. ಇದರಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.

ಸರ್ಕಾರ 10 ಸಾವಿರ ರೂ/ಕ್ವಿಂಟಲ್‌ನಂತೆ ಕಡಲೆ ಕಾಳನ್ನು ಖರೀದಿಸಲು ಗದಗ ಜಿಲ್ಲಾದ್ಯಂತ ಖರೀದಿ ಕೇಂದ್ರ ಪ್ರಾರಂಭಿಸಬೇಕು ಹಾಗೂ ಮುಂಗಾರು ಹಂಗಾಮಿನ ಈರುಳ್ಳಿ, ಮೆಣಸಿನಕಾಯಿ ಬೆಳೆಗಳ ವಿಮಾ ಹಣವನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಬಾಬರಿ ಹಾಗೂ ತಿಮ್ಮಾಪೂರ ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ ಇವರ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮನವಿ ಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶರಣಪ್ಪ ಜೋಗಿನ, ವೆಂಕಟೇಶ ಸತ್ಯಪ್ಪನವರ, ಪರಮೇಶ್ವರಪ್ಪ ಜಂತ್ಲಿ, ಬಾಳಪ್ಪ ಗಂಗರಾತ್ರಿ, ರಾಮಣ್ಣ ಡಂಬಳ, ಗಿರೀಶ ಗುಡ್ಲಾನೂರ, ರಾಮಣ್ಣ ಖಂಡ್ರೆ ಮುಂತಾದವರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!