HomeGadag Newsವಕ್ಫ್ ಮಸೂದೆ ತಿರಸ್ಕರಿಸುವಂತೆ ಮನವಿ

ವಕ್ಫ್ ಮಸೂದೆ ತಿರಸ್ಕರಿಸುವಂತೆ ಮನವಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಕ್ಫ್ ಮಸೂದೆ-2024ನ್ನು ತಿರಸ್ಕರಿಸುವಂತೆ ನರಗುಂದ ತಹಸೀಲ್ದಾರರಿಗೆ ಕರ್ನಾಟಕ ಮುಸ್ಲಿಂ ಯುನಿಟಿ ನರಗುಂದ ವತಿಯಿಂದ ಮನವಿ ಸಲ್ಲಿಸಲಾಯಿತು.

ಯುನಿಟಿಯ ತಾಲೂಕಾಧ್ಯಕ್ಷ ಆಯಾಜ್‌ಖಾನ್ ಪಠಾಣ ಮನವಿ ಸಲ್ಲಿಸಿ ಮಾತನಾಡಿ, ವಕ್ಫ್ ಮಸೂದೆ-2024ನ್ನು ನಾವು ಪ್ರಬಲವಾಗಿ ತಿರಸ್ಕರಿಸುತ್ತೇವೆ. ಈ ಮಸೂದೆ ನಮ್ಮ ಹಕ್ಕುಗಳ ಮೇಲೆ ನಿರ್ಬಂಧ ಹೇರಲು ಹಾಗೂ ನಮ್ಮ ಸಾಂವಿಧಾನಿಕ ಸ್ವಾತಂತ್ರ‍್ಯವನ್ನು ಕುಗ್ಗಿಸಲು ಮಾಡಲಾದ ಒಂದು ಅಪಾಯಕಾರಿ ಪ್ರಯತ್ನವಾಗಿದೆ. ಇದು ನ್ಯಾಯೋಚಿತವಲ್ಲ ಮತ್ತು ನಮ್ಮ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ.

ಈ ಮಸೂದೆ ಜಾರಿಗೆ ಬಂದಲ್ಲಿ ಪ್ರಜಾಪ್ರಭುತ್ವದ ತತ್ವಗಳಿಗೆ ಧಕ್ಕೆ ಬರುವ ಸಾಧ್ಯತೆ ಇದೆ. ಇದು ಜಾತ್ಯಾತೀತ ಮತ್ತು ಸರ್ವಧರ್ಮ ಸಮಭಾವನೆಯನ್ನು ನಾಶ ಮಾಡುವಂತಹ ಪ್ರಯತ್ನವಾಗಿದೆ. ತಕ್ಷಣವೇ ಈ ಮಸೂದೆಯನ್ನು ರದ್ದುಗೊಳಿಸಲು ಹಾಗೂ ಇದನ್ನು ಜಾರಿಗೆ ತರದಂತೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರದ ಗಮನ ಸೆಳೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಫಾರೂಕ್ ಮಾಜಿದ್ ಮುನಿ, ಖಲಂದರ್ ಸಕಲಿ, ಭಾಷಾಸಾಬ್ ಗದಗ್, ಮಾಜಿದ್ ಮುಲ್ಲಾ, ರಫೀಕ್‌ಸಾಬ್ ಗಸ್ತಿ, ಗೌಸ್ ತಬ್ಬಲ್ಸಿ, ಮಕ್ತುಮಸಾಬ ರಾಜಖಾನ್, ಮಹಮ್ಮದ್ ಮದರ್ಖಂಡಿ, ಇಸ್ಮಾಯಲ್ ಖಲೀಫ್, ಸಮೀರ್ ಹುಣಸೀಮರದ, ರಿಯಾಜ್ ಸಕಲಿ ಹಜರತ್‌ಅಲಿ ಮುನ್ನಳ್ಳಿ, ದಾವೂದ್ ಖಾನ ಪಠಾಣ ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!