ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಡಾ. ಪಂಡಿತ ಪುಟ್ಟರಾಜ್ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಂ.ಪಿ. ಮುಳುಗುಂದ ಹಾಗೂ ರಾಜ್ಯ ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕರಿ ರಮೇಶ ಇವರ ನೇತೃತ್ವದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಕರ್ನಾಟಕದ ಜೀವನದಿಗಳಾದ ಮಹದಾಯಿ ಹಾಗೂ ಕಾವೇರಿಯ ಸಮಸ್ಯೆಯನ್ನು ರಾಜ್ಯ ಸರ್ಕಾರ ಆದಷ್ಟು ಬೇಗನೆ ನಿವಾರಿಸಿ ರಾಜ್ಯದಲ್ಲಿ ಕುಡಿಯುವ ನೀರಿನ ಮತ್ತು ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಒತ್ತಾಯಿಸಿದರು.
ನಂತರ ಗದಗ ಪ್ರವಾಸಿ ಮಂದಿರದಲ್ಲಿ ರೈತ ಸಂಘಕ್ಕೆ ಸದಸ್ಯರಾಗಿ ನೇಮಕವಾದ ಕಾರ್ಯಕರ್ತರಿಗೆ ಆದೇಶ ಪ್ರತಿಯನ್ನು ವಿತರಿಸಿ ಸಂಘಟನೆಯ ಉದ್ದೇಶವನ್ನು ಸವಿಸ್ತಾರವಾಗಿ ತಿಳಿಸಲಾಯಿತು. ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ರವಾನಿಸಲಾಯಿತು ಸಂಘದ ಈ ಕಾರ್ಯಕ್ರಮದಲ್ಲಿ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರಾದ ನಾಗೇಶ ಉಂಡಳ್ಳಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ರಮೇಶ ನಾಯ್ಕರ, ಅಬ್ಬಿಗೆರೆ ಮಠದ ಬಸವರಾಜ ಶರಣರು, ಉಮೇಶ ಗೋಪನಕೊಪ್ಪ, ದಾವಲಸಾಬ ನಾಗ್ನೂರ, ಹಾಜಿಅಲಿ ಕೊಪ್ಪಳ, ದೇವಪ್ಪ ಮಲಸಮುದ್ರ, ಶರಣಪ್ಪ ಹೂಗಾರ, ಎಂ.ಪಿ. ಶಲವಡಿ, ಮಕ್ಬುಲಸಾಬ ಶಿರಹಟ್ಟಿ, ಪೀರ್ಜಾದೆ, ಕೆಂಚಪ್ಪ ಬೀದರಗಟ್ಟಿ, ಭೀಮಪ್ಪ ಜಡರ ಸೇರಿದಂತೆ ಸಂಘದ ಸದಸ್ಯರು, ಕಾರ್ಯಕರ್ತರು, ಅಭಿಮಾನಿಗಳು ಭಾಗಿಯಾಗಿದ್ದರು.