ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಚುನಾವಣೆ ಎಲ್ಲಾ ಜಿಲ್ಲೆಗಳಲ್ಲಿ ಜುಲೈ 6ರಂದು ಘೋಷಣೆಯಾಗಿದ್ದು, ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪ್ರತಿನಿಧಿಗಳ ಆಯ್ಕೆಗೆ ಚುನಾವಣೆ ಜರುಗುವುದು.
ಗದಗ ತಾಲೂಕಿನಿಂದ ಸಾಮಾಜಿಕ ಚಿಂತಕ ಸಂಗಮೇಶ ಹಾದಿಮನಿಯವರು ನಾಮಪತ್ರ ಸಲ್ಲಿಸಿದ್ದು, ಸಂಘಟನೆಯ ಮುಂಚೂಣಿಯಲ್ಲಿರುವ ಸಂಗಮೇಶ ಹಾದಿಮನಿಯವರನ್ನು ಬೆಂಬಲಿಸುವಂತೆ ಪ್ರೊ. ದಳವಾಯಿ ಸಮಾಜ ಭಾಂದವರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ರಾಮಣ್ಣ ಇರಕಲ್ಲ, ಗುರಪ್ಪ ತಿರ್ಲಾಪೂರ, ಅಮಿತ ಪೂಜಾರ, ಹರೀಶ ಬಾರಕೇರ, ಬಸವರಾಜ ಗುಡಿಸಾಗರ, ಮಧುಶೇಖರ ಪೂಜಾರ, ಹೇಮಂತ ದಳವಾಯಿ ಮಂಜುನಾಥ ಗುಡಿಸಾಗರ, ಸುಜಾತ ಗುಡಿಸಾಗರ, ಸೌಮ್ಯ ಸುಣಗಾರ, ಕವಿತಾ ಗುಡಿಸಾಗರ, ರಾಜು ಪೂಜಾರ, ಶಂಕರಗೌಡ ರಾಹುತ್, ನಾಗರಾಜ ಸಮಾಜ ಬಾಂಧವರು ಉಪಸ್ಥಿತರಿದ್ದರು.



