ವಿಜಯಸಾಕ್ಷಿ ಸುದ್ದಿ, ಗದಗ : ಪಿಂಜಾರ/ನದಾಫ್ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಎಫ್. ಹಳ್ಯಾಳ ಮಾತನಾಡಿ, ಸರಕಾರದ ನಿರ್ದೇಶನದಂತೆ ಅಭಿವೃದ್ಧಿ ನಿಗಮದಿಂದ ಮತ್ತು ಇತರ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸರಕಾರದ ನಿರ್ದೇಶನ ಇದ್ದರೂ, ಸತತವಾಗಿ ತಾಂತ್ರಿಕ ದೋಷಗಳಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಯಾವದೇ ಯೋಜನೆಗಳು ಸರಿಯಾಗಿ ತಲುಪದೇ ವಂಚಿತರಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎಂ.ಬಿ. ನದಾಫ್, ಶೌಕತಅಲಿ ಎಂ.ಅಣ್ಣಿಗೇರಿ, ಹೆಚ್.ಆರ್. ನದಾಫ್, ಝಾಕೀರ ಬಾಗಲಕೋಟ, ಮೈನುದ್ದೀನ ಬಿಜಾಪೂರ, ಆರ್.ವಾಯ್. ನದಾಫ್, ಹುಸೇನಸಾಬ ಬೆಳಹೊಡ, ಫಕರುಸಾಬ ನದಾಫ್, ರಾಜೇಸಾಬ ಶಿಶ್ವಿನಹಳ್ಳಿ, ಎ.ಎಕೆ. ನದಾಫ್, ಶರೀಪ ಮದರಿ, ತೌಜಲಿ ನದಾಫ್, ರಿಯಾಝ ನದಾಫ್, ರಿಯಾಝ ಇಲಾಳಿ, ಆಸೀಪ ನದಾಫ್, ಉಪಸ್ಥಿತರಿದ್ದು.