ಗ್ರಾ.ಪಂ.ಗಳ ಕುಂದು ಕೊರತೆಗಳನ್ನು ನೀಗಿಸುವಂತೆ ಸಚಿವರಿಗೆ ಮನವಿ

0
okkoota
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ಗ್ರಾಮ ಪಂಚಾಯಿತಿಗಳ ಕುಂದು-ಕೊರತೆಗಳು ಹಾಗೂ ಅಧಿಕಾರಿಗಳ ನೇಮಕ ಮಾಡುವಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆಯವರಿಗೆ ಮುಂಡರಗಿ ತಾಲೂಕಾ ಗ್ರಾ.ಪಂ ಸದಸ್ಯರ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಲಾಯಿತು.

Advertisement

ಗದಗ ಜಿಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಭಾರಿ ಇರುವುದರಿಂದ ಅಭಿವೃದ್ಧಿಗಳು ಕುಂಠಿತವಾಗುತ್ತಿವೆ. 5 ಗ್ರಾಮ ಪಂಚಾಯಿತಿಗಳಿಗೆ ಒಬ್ಬರೇ ಇಂಜಿನಿಯರ್ ಇರುವುದರಿಂದ ಅಭಿವೃದ್ಧಿ ಕಾರ್ಯಗಳು ನಿಧಾನವಾಗುತ್ತಿವೆ. ಗ್ರಾಮ ಪಂಚಾಯಿತಿಯಲ್ಲಿ ಮೆಟೀರಿಯಲ್ ಬಿಲ್ಲುಗಳು ತಿಂಗಳಾದರೂ ಕೂಡ ಖಾತೆಗೆ ಜಮಾ ಆಗದೆ ಅಲೆದಾಡುವಂತಾಗಿದೆ. ಈ ಎಲ್ಲ ಕೊರತೆಗಳನ್ನು ನೀಗಿಸಿ, ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಗಣೇಶ ಭರಮಕ್ಕನವರ, ಪರ್ವತಗೌಡ ಪಾಟೀಲ, ಶಿವಕುಮಾರ ಬಿ., ಬಹದ್ದೂರ ದೇಸಾಯಿ, ಶಿವಕುಮಾರ ಪಾಟೀಲ, ರವಿ, ಜ.ವಿ. ಭುವನೇಶ್ವರಿ, ಜಗದೀಶ ಪಾಟೀಲ, ಕುಬೇರ ನಾಯಕ, ಧರಂಸಿಂಗ್ ಸೇರಿದಂತೆ ಒಕ್ಕೂಟದ ಸರ್ವ ಸದಸ್ಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here