ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಗದಗ-ಬೆಟಗೇರಿ ನಗರಸಭೆ ಕಾರ್ಯಾಲಯ ಶಾಖೆಯ ಅಧ್ಯಕ್ಷರಾದ ಸಿ.ಆರ್. ಹಾದಿಮನಿ, ಜಿಲ್ಲಾಧ್ಯಕ್ಷ ಹೇಮೇಶ ಯಟ್ಟಿ, ಜಿಲ್ಲಾ ಉಪಾಧ್ಯಕ್ಷ ಕೆಂಚಪ್ಪ ಎಫ್.ಪೂಜಾರ, ಗೌರವಾಧ್ಯಕ್ಷ ನಾಗೇಶ ಬಳ್ಳಾರಿ ಇವರುಗಳ ನೇತೃತ್ವದಲ್ಲಿ ಕಾನೂನು, ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವರಿ ಸಚಿವ ಹೆಚ್.ಕೆ. ಪಾಟೀಲರಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಸಿ.ಆರ್. ಹಾದಿಮನಿ ಮಾತನಾಡಿ, ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು, ಗುತ್ತಿಗೆ/ಹೊರಗುತ್ತಿಗೆ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನೇರ ವೇತನ ಪಾವತಿ ಮಾಡುವುದು, ಪೌರಕಾರ್ಮಿಕರ ವಿಷೇಶ ನೇವಕಾತಿಯಡಿ ಪೌರಕಾರ್ಮಿಕರು ನೇಮಕಾತಿ ಹೊಂದಿದ್ದು, ಸದರಿ ನೌಕರರಿಗೆ ಸರ್ಕಾರವು ನಗರ ಸ್ಥಳೀಯ ಸಂಸ್ಥೆ ಸ್ಥಳೀಯ ನಿಧಿಯಿಂದ ವೇತನ ಪಡೆಯಲು ಆದೇಶಿಸಿಲಾಗಿದ್ದನ್ನು ರದ್ದುಪಡಿಸಿ, ಎಸ್.ಎಫ್.ಸಿ ಅನುದಾನದಡಿ ವೇತನ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಶೇಖಪ್ಪ ತಮ್ಮಣ್ಣವರ, ವಿರೂಪಾಕ್ಷಪ್ಪ ರಾಮಗಿರಿ, ಸಣ್ಣರಾಮಪ್ಪ ಬಳ್ಳಾರಿ, ವೆಂಕಟೇಶ ಬಳ್ಳಾರಿ, ಅರವಿಂದ ಕುರ್ತಕೋಟಿ, ಸಣ್ಣಪ್ಪ ಬೋಳಮ್ಮನವರ, ಪಂಚಾಕ್ಷರಿ ದೊಡ್ಡಮನಿ, ಆಂಜನೇಯ ಪೂಜಾರ, ಶಿವು ಜಂಬಲದಿನ್ನಿ, ವಿಶ್ವನಾಥ ದೊಡ್ಡಮನಿ, ಲಕ್ಷ್ಮಣ ಕೋಟ್ನಿಕಲ್, ಶ್ರೀಪಾದ ಹೊಸಳ್ಳಿ, ನಾರಾಯಣ ಬಳ್ಳಾರಿ, ಮಂಜು ನರಗುಂದ, ರಮೇಶ ಬಾರಕೇರ, ಪರಶುರಾಮ ಸಂಗಾಪೂರ, ಮಲ್ಲಿಕಾರ್ಜುನ ನಾವಳ್ಳಿ, ಎಫ್.ಬಿ. ಬೆನ್ನಾಮಟ್ಟಿ, ಟಿ.ಟಿ. ಉಪ್ಪಾರ, ಮೈಲಾರಪ್ಪ ಬಂಡಿವಾಡ, ರಂಗನಾಥ ಖೋಣಿ, ರಾಜು ಆರಟ್ಟಿ, ರಿಯಾಜ್ ಬೊದ್ಲೆಖಾನ, ಗುರು ಒಡೆಯರ, ರಾಘವೇಂದ್ರ ಅಕ್ಕಿ, ರಾಮು ಕೋಟ್ನಿಕಲ್, ದುರಗಪ್ಪ ಪೂಜಾರ, ಶಿವಲಿಂಗಪ್ಪ ಸೋಮಪೂರ, ಸಂಗವ್ವ ಸೋಮಪೂರ, ಮಂಜುಳಾ ಯಗ್ಗಪಲ್ಲೆ, ಶಂಕರವ್ವ ಹರಿಜನ ಮುಂತಾದವರು ಉಪಸ್ಥಿತರಿದ್ದರು.