ವಿಜಯಸಾಕ್ಷಿ ಸುದ್ದಿ, ಗದಗ : ವಾರ್ಡ್ ನಂ. 16ರ ಹೊಂಬಳನಾಕಾ ಜನತಾ ಕಾಲೋನಿಯ ಸಾರ್ವಜನಿಕರು ಮಳೆಗಾಲದಲ್ಲಿ ಪರದಾಡುವಂತಾಗಿದೆ. ಸರಿಯಾಗಿ ಮಳೆ ನೀರು ಹೊಗಲು ಅನಕೂಲವಿಲ್ಲದೆ ಅಧ್ವಾನ ಸೃಷ್ಟಿಯಾಗುತ್ತಿದೆ ಎಂದು ಹೊಂಬಳ ನಾಕಾ ಜನತಾ ಕಾಲೋನಿ ಅಭಿವೃದ್ಧಿಪರ ಸೇವಾ ಸಂಘದ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಆರೋಪಿಸಿದ್ದಾರೆ.
Advertisement
ಅವರು ಈ ಕುರಿತು ಪ್ರಕಟಣೆ ನೀಡಿ, ಮಳೆ ನೀರು ರಾಜಕಾಲುವೆಯಲ್ಲಿ ಹರಿದು ಹೊಗುವ ಬದಲು ಕಾಲೋನಿಯಲ್ಲಿನ ಮನೆಗೂ ನುಗ್ಗುತ್ತಿದೆ. ಈ ಬಗ್ಗೆ ನಗರಸಭೆ ಅಥವಾ ಜಿಲ್ಲಾಡಳಿತ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವರಾದ ಎಚ್.ಕೆ. ಪಾಟೀಲರು ಇತ್ತ ಗಮನಿಸಿ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವದರೊಂದಿಗೆ ಈ ಭಾಗದ ನೊಂದ ಬಡ ಜನತೆಗೆ ನೆಮ್ಮದಿಯಿಂದ ಬದುಕಲು ಅನಕೂಲತೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.