Homekoppalಜು.28ಕ್ಕೆ ಪತ್ರಿಕಾ ದಿನಾಚರಣೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

ಜು.28ಕ್ಕೆ ಪತ್ರಿಕಾ ದಿನಾಚರಣೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಮಟ್ಟದಲ್ಲಿ ಜುಲೈ 28ರಂದು ಪತ್ರಿಕಾ ದಿನಾಚರಣೆ ಪ್ರಯುಕ್ತ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು, ಪತ್ರಕರ್ತರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆೆ.

ಕೊಪ್ಪಳ ಜಿಲ್ಲೆಯ ನಿವಾಸಿಗಳು ಮತ್ತು ಇಲ್ಲಿಯೇ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದ್ದು, ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿರುವ ಪತ್ರಕರ್ತರ ಮಕ್ಕಳು ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿಯಲ್ಲಿ ಶೇ. 60ಕ್ಕಿಂತ ಹೆಚ್ಚು ಅಂಕ ಪಡೆದು ಪ್ರಥಮ ಪ್ರಯತ್ನದಲ್ಲಿಯೇ 2023-2024ನೇ ಸಾಲಿನಲ್ಲಿ ತೇರ್ಗಡೆ ಹೊಂದಿರುವ ಮಕ್ಕಳು ಶಾಲೆ, ಕಾಲೇಜಿನಿಂದ ದೃಢೀಕೃತ ಅಂಕಪಟ್ಟಿಯ ನಕಲು, ಭಾವಚಿತ್ರ ಮತ್ತು ಆಧಾರ್ ಕಾರ್ಡನ್ನು ಜುಲೈ 15ರೊಳಗೆ ಸಲ್ಲಿಸಬೇಕು. ನಂತರ ಬಂದವರನ್ನು ಪರಿಗಣಿಸಲಾಗುವದಿಲ್ಲ.

ಹೆಚ್ಚಿನ ಮಾಹಿತಿ, ಅರ್ಜಿ ಸಲ್ಲಿಸಲು ಮಂಜುನಾಥ ಜಿ.ಗೊಂಡಬಾಳ (ಸಂಚಾಲಕರು, ಪ್ರತಿಭಾ ಪುರಸ್ಕಾರ ಸಮಿತಿ-ಕಾ.ನಿ.ಪ) ಮೊ: 9448300070, ಉಮೇಶ ಪೂಜಾರ (ಸದಸ್ಯರು, ಪ್ರತಿಭಾ ಪುರಸ್ಕಾರ ಸಮಿತಿ) ಮೊ: 9448300070 ಅಥವಾ ಸಿದ್ದು ಹಿರೇಮಠ (ಸದಸ್ಯರು, ಪ್ರತಿಭಾ ಪುರಸ್ಕಾರ ಸಮಿತಿ) ಮೊ: 8310031049) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!