ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ವಕ್ಫ್ ಬೋರ್ಡ್ ಚೇರಮನ್ ಜಿ.ಎಂ. ದಂಡಿನರ ಮರಣದ ನಂತರ ಖಾಲಿ ಉಳಿದಿರುವ ಅಧ್ಯಕ್ಷ ಸ್ಥಾನವನ್ನು ಧರ್ಮದ ಜ್ಞಾನವುಳ್ಳ, ಸ್ವಜನ ಪಕ್ಷಪಾತ ಮಾಡದ ಹಾಗೂ ಸಮಾಜದ ಬಡ ಮಕ್ಕಳ ಶೈಕ್ಷಣಿಕ ಹಾಗೂ ಅಭಿವೃದ್ಧಿಯ ಚಿಂತಕರಾಗಿರುವ, ವಕ್ಫ್ ಸಂಸ್ಥೆಯಲ್ಲಿ ನೋಂದಾಯಿತ ಯಾವುದೇ ಜಮಾತ, ಮಸ್ಜಿದ್, ದರ್ಗಾದ ಪದಾಧಿಕಾರಿಗಳನ್ನು ಹೊರತುಪಡಿಸಿ, ಒಳ್ಳೆಯ ವ್ಯಕ್ತಿತ್ವವುಳ್ಳ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಜೆಡಿಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಅಲಿ ಎಚ್.ಕೊಪ್ಪಳ ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಗ್ರಹಿಸಿದ್ದಾರೆ.
Trending Now



