ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಶ್ರೀ ಡಾ. ಪಂಡಿತ ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಂ.ಪಿ. ಮುಳಗುಂದ ಅವರ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಗದಗ ಜಿಲ್ಲಾ ಮಹಿಳಾ ಉಪಾಧ್ಯಕ್ಷರನ್ನಾಗಿ ಆರಾಧನಾ ಜಿ.ಬಣಕಾರರನ್ನು ನೇಮಕ ಮಾಡಿ ಆದೇಶ ಪತ್ರ ನೀಡಲಾಯಿತು.
Advertisement
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಅಶೋಕ ಬಶೆಟ್ಟಿ, ಗದಗ ಜಿಲ್ಲಾಧ್ಯಕ್ಷ ಮಂಜುನಾಥ ಗುಡದೂರ, ಜಿಲ್ಲಾ ಕಾರ್ಯದರ್ಶಿ ಶಂಭು ಅಂಗಡಿ, ಚನ್ನಪ್ಪ ಕರಬಸಪ್ಪ ಬಣ್ಣಪ್ಪನವರ, ಪುಷ್ಪಾ ಬಿಜಾಪುರ, ಆದಿತ್ಯ, ಸೃಷ್ಟಿ ಸಂಕುಲ ಸಂಸ್ಥೆ ಗದಗ, ಆರಾಧ್ಯ ಹಿರೇಮಠ, ಈರಣ್ಣ, ದೃಷ್ಟಿ, ವಿನುತಾ, ಸುರಭಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.