ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಪುರಸಭೆಗೆ ಕರ್ನಾಟಕ ಪೌರಸಭೆ ಕಾಯ್ದೆಯಡಿಯಲ್ಲಿ ಐವರು ನೂತನ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
Advertisement
ಪಟ್ಟಣದ ಯುವ ಮುಖಂಡರಾದ ನೀಲಪ್ಪ ಪೂಜಾರ, ವಾಸೀಂಅಕ್ರಮ್ ಮುಚ್ಚಾಲೆ, ಶಿವಪ್ರಕಾಶ ಕೊಂಚಿಗೇರಿಮಠ, ಮಹಾಂತೇಶ ಗುಡಿಸಲಮನಿ ಹಾಗೂ ಕಿರಣ ನವಲೆ ಇವರನ್ನು ತಕ್ಷಣದಿಂದ ಜಾರಿಯಾಗುವಂತೆ ಪುರಸಭೆಗೆ ನಾಮನಿರ್ದೇಶನ ಮಾಡಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಆದೇಶ ನೀಡಿದ್ದಾರೆ.