ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ತಾಲೂಕಿನ ನಾದಿಗಟ್ಟಿ ಗ್ರಾಮದ ಯುವ ಮುಖಂಡ ಮಲ್ಲೇಶಪ್ಪ ರಾ.ವಡ್ಡರ ಅವರನ್ನು ಕರ್ನಾಟಕ ಅಹಿಂದ ಜನ ಸಂಘ ಬೆಂಗಳೂರು ಇದರ ರಾಜ್ಯ ಗ್ರಾಮೀಣ ಸಂಘಟನಾ ಕಾರ್ಯಾಧ್ಯಕ್ಷರ ಹುದ್ದೆಗೆ ಕರ್ನಾಟಕ ಅಹಿಂದ ಜನ ಸಂಘ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಯ್ಯಪ್ಪಗೌಡ ಅವರು ನೇಮಕ ಮಾಡಿದ್ದಾರೆ.
ಅಹಿಂದ ಜನರ ಶ್ರೇಯೋಭಿವೃದ್ಧಿಗಾಗಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅಹಿಂದ ಜನ ಸಮುದಾಯದವರನ್ನು ಮುಖ್ಯ ವಾಹಿನಿಗೆ ತರುವ ಹಾಗೂ ಸಂಘಟನೆ, ಬಲವರ್ಧನೆಗಾಗಿ ಸಂಘಟನೆಯಲ್ಲಿ ಮಲ್ಲೇಶಪ್ಪ ವಡ್ಡರ ಅವರನ್ನು ರಾಜ್ಯ ಕಾರ್ಯಾಧ್ಯಕ್ಷ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.



