ಕರವೇ ತಾಲೂಕಾಧ್ಯಕ್ಷರಾಗಿ ಶಿವು ಮಠದ ನೇಮಕ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದ ವತಿಯಿಂದ ಶಿರಹಟ್ಟಿ ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಶಿವು ಮಠದ ಇವರನ್ನು ನೇಮಕ ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್.ಅಬ್ಬಿಗೇರಿ ಮಾತನಾಡಿ, ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಗದಗ ಜಿಲ್ಲೆಯಲ್ಲಿ ಸಂಘಟನೆಯನ್ನು ಗಟ್ಟಿಗೊಳಿಸುವ ಬಗ್ಗೆ ಕಾರ್ಯಕರ್ತರಿಗೆ ತಿಳುವಳಿಕೆ ಮೂಡಿಸುವುದರ ಮೂಲಕ ಜವಾಬ್ದಾರಿ ವಹಿಸಿ ಸಂಘಟನೆ ಬಲಪಡಿಸುವಂತೆ ತಾಲೂಕ ಅಧ್ಯಕ್ಷರಿಗೆ ಸೂಚಿಸಿದರು.

ಈಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನವರ ಮಾತನಾಡಿ, ಸಂಘಟನೆಯನ್ನು ಗ್ರಾಮ ಮಟ್ಟದಲ್ಲಿ ಹುಟ್ಟು ಹಾಕುವದು ಕರವೇ ತಾಲೂಕಾಧ್ಯಕ್ಷರುಗಳ ಜವಾಬ್ದಾರಿಯಾಗಿರುತ್ತದೆ. ಅದರ ಜೊತೆಗೆ ಸಂಘಟನೆಯನ್ನು ಗಟ್ಟಿಗೊಳಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮುತ್ತಣ್ಣ ಚವಡಣ್ಣವರ, ಮುಖಂಡರಾದ ಕೃಷ್ಣಾ ಲಮಾಣಿ, ಮಾರುತಿ ಇಳಗೇರ, ತೌಸೀಪ್ ಡಾಲಾಯತ್, ಗೌಸುಸಾಬ ಶಿರಹಟ್ಟಿ, ಕುಮಾರ ರ‍್ಯಾವಣ್ಣವರ, ವಿನಾಯಕ ಬದಿ, ದಾವಲಸಾಬ ತಹಸೀಲ್ದಾರ, ನಿಯಾಜ ಶೇಖ, ಲೋಕೇಶ ಸುತಾರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here