ವಿಜಯಸಾಕ್ಷಿ ಸುದ್ದಿ, ಗದಗ: ನಟರಂಗ ಸಾಂಸ್ಕೃತಿಕ ಕೇಂದ್ರದ ವತಿಯಿಂದ ನಗರದ ಶ್ರೀ ಜಗದ್ಗುರು ಶ್ರೀ ತೋಂಟದಾರ್ಯ ಮಠದ ಆವರಣದಲ್ಲಿ ಪುಣ್ಯಕೋಟಿ ರೂಪಕ ಪ್ರದರ್ಶನ ಜರುಗಿತು. ಈ ಪ್ರದರ್ಶನದಲ್ಲಿ ಭೂಮಿಕಾ ರಾಘವೇಂದ್ರ ಹಾದಿಮನಿ ಪುಣ್ಯಕೋಟಿಯ ಪಾತ್ರ ನಿರ್ವಹಿಸಿದ್ದು, ಇವಳ ಅಭಿನಯಕ್ಕೆ ಗದಗ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಕಾರ್ಯಕ್ರಮಗಳು ಮಕ್ಕಳಿಂದ ಮಾಡಿಸುತ್ತಿರುವ ನಟರಂಗ ಸಾಂಸ್ಕೃತಿ ಕೇಂದ್ರದ ಅಧ್ಯಕ್ಷ ಸೋಮು ಚಿಕ್ಕಮಠ, ಪುಣ್ಯಕೋಟಿ ನಾಟಕದ ನಿರ್ದೇಶಕ ಮಾಂತೇಶ್ ಗಜೇಂದ್ರಗಡ ಹಾಗೂ ಅವರ ತಂಡದ ಎಲ್ಲ ಸದಸ್ಯರನ್ನು ಅಭಿನಂದಿಸಿದ್ದಾರೆ.
ಧಾರವಾಡ ರಂಗಾಯಣ ನಿರ್ದೇಶಕರಾದ ರಾಜು ತಾಳಿಕೋಟಿ, ಡಾ. ಜಿ.ಬಿ. ಪಾಟೀಲ್, ವಿವೇಕಾನಂದಗೌಡ ಪಾಟೀಲ್, ಪ್ರೊ. ಕೆ.ಎಚ್. ಬೇಲೂರ, ಶ್ರೀನಿವಾಸ್ ಹುಯಿಲಗೋಳ, ಚನ್ನವೀರಶಾಸ್ತಿçà ಕಡಣಿ, ವಿಜಯಕುಮಾರ ಹಿರೇಮಠ, ಪ್ರೊ. ಬಾಹುಬಲಿ ಜೈನರ, ಅಜಿತ್ ಘೋರ್ಪಡೆ, ರಂಗಾಯಣದ ಕೇಶವ್ ಬಡಿಗೇರ್, ಸೋಮಶೇಖರ್ ಚಿಕ್ಕಮಠ, ಪೂಜಾ ಸೋಮಶೇಖರ್ ಚಿಕ್ಕಮಠ, ಬಸವರಾಜ ಮುಖಂಡಮಠ, ನಾಗರಾಜ ಮಿಸಾಳ, ನಾಗರಾಜ ಬಡಿಗೇರ, ಅಕ್ಷತಾ ಹಿರೇಮಠ, ಜ್ಯೋತಿ ಅಲ್ಕುಂದಿ, ಮಹಾಂತೇಶ ಹೂಗಾರ, ಸಂತೋಷ ಜಾಲಿಯಾಳ, ರಾಘವೇಂದ್ರ ಹಾದಿಮನಿ, ರೋಹಿಣಿ ರಾಘವೇಂದ್ರ ಹಾದಿಮನಿ, ಸುಮಿತ್ರಾ, ಅಶೋಕ, ಅಮೃತಾ, ಸುರೇಶ, ಗುರುಪಾದಪ್ಪ ಹಾದಿಮನಿ, ವೀರಪ್ಪ ವೀರವ್ವ ಹೊಸಳ್ಳಿ ಸೇರಿದಂತೆ ಅನೇಕ ಪ್ರೇಕ್ಷಕರು ರೂಪಕವನ್ನು ವೀಕ್ಷಿಸಿ ಮಕ್ಕಳ ಅಭಿನಯವನ್ನು ಶ್ಲಾಘಿಸಿದರು.



