ಅಪ್ಪು ಎಂಬ ಅಪರೂಪದ ವ್ಯಕ್ತಿತ್ವವನ್ನು ಸದಾ ಜೀವಂತವಾಗಿಡುವ ಕಾಯಕಗಳು ನಡೆಯುತ್ತಲೇ ಇವೆ. ನಿನ್ನೆಯಷ್ಟೇ ರಾಜ್ಯ ರಾಜಧಾನಿಯಿಂದ ಹಿಡಿದು ಹಳ್ಳಿ ಹಳ್ಳಿಯ ಮೂಲೆಗಳಲ್ಲಿಯೂ ಪರಮಾತ್ಮನ 50ನೇ ಜನ್ಮೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಅಪ್ಪುವನ್ನು ನಾನಾ ವಿಧದಲ್ಲಿ ಬಗೆ ಬಗೆಯಲ್ಲಿ ಪವರ್ ಪಡೆ ಸಂಭ್ರಮಿಸುತ್ತಿದೆ. ನಗುವಿನ ಒಡೆಯ ಡಾ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರಿಯ ಮಡದಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಪ್ಪು ನೆನಪುಗಳನ್ನು ಸದಾ ಹಸಿಯಾಗಿ, ಉಸಿರಾಗಿಡುವ ಮಹತ್ತರ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ. ಅದರ ಭಾಗವಾಗಿ ಸಿದ್ದಗೊಂಡಿರುವುದೇ ಅಪ್ಪು ಆತ್ಮಕಥೆ.
ಜನಮನ ಗೆದ್ದ ಅಪ್ಪುವಿನ ಭಾವನಾತ್ಮಕ ಪಯಣವನ್ನು ಪುಸ್ತಕ ರೂಪದಲ್ಲಿ ಅಶ್ವಿನಿ ಪುನೀತ್ ಹೊರತಂದಿದ್ದಾರೆ. ನಿನ್ನೆ ಅವರ ಹುಟ್ಟುಹಬ್ಬದ ವಿಶೇಷವಾಗಿ ಅಪ್ಪು ಜೀವನಚರಿತ್ರೆ ಪುಸ್ತಕವನ್ನು ಅನಾವರಣ ಮಾಡಿದ್ದಾರೆ. ಪುನೀತ್ ಅವರ ಆತ್ಮಚರಿತ್ರೆಯಲ್ಲಿ ಸಿನಿಮಾ ಪಯಣ, ಸಾಹಸಗಳ ಬಗ್ಗೆ ನಮಗೆ ನಿಮಗೆ ಗೊತ್ತಿರದ ಮಾಹಿತಿಯಂತೂ ಇರಲಿದೆ.
ಪತ್ನಿಯೇ ಸಾರಥಿ
ಅಪ್ಪು ಜೀವನ ಚರಿತ್ರೆಗೆ ಸೂತ್ರಧಾರರು ಬೇರೆ ಅಲ್ಲ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್. ಅಪ್ಪು ಆತ್ಮೀಯ ಗೆಳೆಯ ಪ್ರಕೃತಿ ಬನವಾಸಿ ಜೊತೆಗೂಡಿ ಅಶ್ವಿನಿ ಈ ಪುಸ್ತಕ ಬರೆದಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳಲೂ ಪುಸ್ತಕ ಪ್ರಕಟವಾಗಲಿದ್ದು, ಶೀಘ್ರವೇ ಸಿನಿಮಾ ಪ್ರೇಮಿಗಳ ಕೈ ಸೇರಲಿದೆ ಅಪ್ಪು ಜೀವನಚರಿತ್ರೆ.
ಪಿಆರ್ಕೆ ಸ್ಟಾರ್ ಫ್ಯಾನ್ಢಮ್ ಬಿಡುಗಡೆ
ಒಂದ್ಕಡೆ ಅಪ್ಪು ಜೀವನಚರಿತ್ರೆ ಪುಸ್ತಕದ ಜೊತೆಗೆ ಪವರ್ ಪಡೆಗಾಗಿ ವಿಶೇಷ ಆ್ಯಪ್ ಕೂಡ ತಯಾರಾಗಿದೆ. ಪಿಆರ್ಕೆ ಸ್ಟಾರ್ ಫ್ಯಾನ್ಢಮ್ ಎಂಬ ಹೆಸರಿ ಆಪ್ ಇದಾಗಿದ್ದು, ಈ ಆ್ಯಪ್ ಮೂಲಕ ಅಭಿಮಾನಿಗಳು ಪರಮಾತ್ಮನ ದರ್ಶನ ಮಾಡಬಹುದು. ಶೀಘ್ರದಲ್ಲೇ ಆ್ಯಪ್ ಅಭಿಮಾನಿಗಳ ಕೈ ಸೇರಲಿದ್ದು, ತಮ್ಮ ಮೊಬೈಲ್ನಲ್ಲಿಯೇ ಫ್ಯಾನ್ಸ್ ನೆಚ್ಚಿನ ರಾಜರತ್ನನನ್ನು ಕಣ್ತುಂಬಿಕೊಳ್ಳಬಹುದು.