‘ಕಾಂತಾರ’ ಚಿತ್ರದ ಕಂಬಳ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವು

0
Spread the love

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಸಿನಿಮಾ 2022ರಲ್ಲಿ ರಿಲೀಸ್ ಆಗಿದ್ದು ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಮೂಲಕ ಕಂಬಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಇಂದು ಕಾಂತಾರ ಸಿನಿಮಾದ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವನ್ನಪ್ಪಿದೆ. ಅಪ್ಪು ಕೋಣದ ಮಾಲೀಕರು ಹಾಗೂ ಕಂಬಳ ಪ್ರಿಯರಿಗೆ ಈ ವಿಚಾರ ಬೇಸರ ಉಂಟು ಮಾಡಿದೆ.

Advertisement

‘ಕಾಂತಾರ’ ಸಿನಿಮಾದಲ್ಲಿ ರಿಷಬ್‌ ಕಂಬಳದಲ್ಲಿ ಕೋಣಗಳನ್ನು ಓಡಿಸಿದ್ದರು. ಇದಕ್ಕೆ ಹಲವು ದಿನಗಳ ಕಾಲ ಪ್ರಾಕ್ಟೀಸ್‌ ಮಾಡಿದ್ದರು. ಕಾಂತಾರ ಸಿನಿಮಾದಲ್ಲಿ ಕಾರ್ಕಳದ ಬೈಂದೂರಿನ ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಸಾಕಿದ್ದ ಕೋಣ ಬಳಕೆ ಮಾಡಲಾಗಿತ್ತು. ಆ ಕೋಣಗಳಿಗೆ ಅಪ್ಪು ಹಾಗೂ ಕಾಲಾ ಎಂದು ಹೆಸರು ಇಡಲಾಗಿತ್ತು. ಅವುಗಳಲ್ಲಿ ಇಂದು ಅಪ್ಪು ಕೋಣ ನಿಧನ ಹೊಂದಿದೆ.

ಅಪ್ಪು ಹಾಗೂ ಕಾಲಾ ಕೋಣಗಳು ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಕುಂದಾಪುರ ಭಾಗದಲ್ಲಿ ನಡೆಯುವ ಕಂಬಳದಲ್ಲಿ 5 ವರ್ಷ ಈ ಕೋಣಗಳು ಚಾಂಪಿಯನ್ ಆಗಿದ್ದವು. ಬೆಂಗಳೂರು ಕಂಬಳದಲ್ಲೂ ಕನೆಹಲಗೆ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದವು. ಕರಾವಳಿಯ ಬಹುತೇಕ ಕಂಬಳಗಳಲ್ಲಿ ಕೀರ್ತಿ-ಬಹುಮಾನ ಸಂಪಾದಿಸಿದ್ದ ಅಪ್ಪು ಕೋಣ ಅಗಲಿರುವುದು ಹಲವರಿಗೆ ನೋವುಂಟು ಮಾಡಿದೆ.


Spread the love

LEAVE A REPLY

Please enter your comment!
Please enter your name here