ಬೆಂಗಳೂರು:- ಕರ್ನಾಟಕದಲ್ಲಿ ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ. ಹಲವೆಡೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿ ಪ್ರೀತಿಯ ನಟನನ್ನು ನೆನೆದಿದ್ದಾರೆ.
ಇದೇ ಹೊತ್ತಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ, ಆರ್‌ಸಿಬಿ ತರಬೇತುದಾರ ದಿನೇಶ್ ಕಾರ್ತಿಕ್, ಅಪ್ಪು ನೆನೆದಿದ್ದಾರೆ. ನಾನು ಮೂಲತಃ ಚೆನೈನವನು. ನನಗೆ ರಜನಿಕಾಂತ್, ಕಮಲ್ ಹಾಸನ್, ವಿಜಯ್ ಅಂದ್ರೆ ಇಷ್ಟ. ಆದ್ರೆ RCBಗಾಗಿ ಮೂರು ವರ್ಷ ಆಡುವಾಗ ನನಗೆ ಅನ್ಸಿದ್ದು.. ಇಡೀ ಬೆಂಗಳೂರು ಒಬ್ಬರನ್ನ ಇಷ್ಟಪಡುತ್ತೆ ಅಂತ. ಅದು ಯಾರಂದ್ರೆ ಪುನೀತ್ ರಾಜ್‌ಕುಮಾರ್. ಪ್ರತಿ ಮೂಲೆಯಲ್ಲೂ ಅಪ್ಪು ಫೋಟೋವನ್ನ ನೋಡಿದ್ದೇನೆ. ಅವರು ಬೆಂಗಳೂರಿನ ಪ್ರತಿ ಮೂಲೆಯಲ್ಲೂ ಇದ್ದಾರೆ ಅನ್ಸುತ್ತೆ. ಆ ಮಟ್ಟಿಗೆ ಅಭಿಮಾನಿಗಳು ಅವರನ್ನ ಇಷ್ಟ ಪಡ್ತಾರೆ ಎಂದು ಪುನೀತ್ ಅವರನ್ನು ಕ್ರಿಕೆಟಿಗ ಕೊಂಡಾಡಿದ್ದಾರೆ.



