ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ

0
Aradhana mahotsava of Shri Jayathirtha
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ವಿಶ್ವಮಧ್ವ ಮಹಾಪರಿಷತ್ ಗದಗ ಶಾಖೆ ವತಿಯಿಂದ ಜುಲೈ 24ರಿಂದ 26ರವರೆಗೆ ಮೂರು ದಿನಗಳ ಕಾಲ ನಗರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ ಜರುಗಲಿದೆ.

Advertisement

ಪ್ರತಿದಿನ ಸಾಯಂಕಾಲ 6-30ರಿಂದ ಪಂ. ಶ್ರೀ ವರದರಾಜಾಚಾರ್ಯ ಜಾಲಿಹಾಳ ಇವರಿಂದ ಶ್ರೀ ಜಯತೀರ್ಥರ ಚರಿತ್ರೆ ಹಾಗೂ ಕೃತಿಗಳು ವಿಷಯ ಕುರಿತು ಪ್ರವಚನ, ಪ.ಪೂ.ಪಂ. ಶ್ರೀ ಪಾಂಡುರಂಗಾಚಾರ್ಯ ಹುನಗುಂದ ಇವರ ಸಾನಿಧ್ಯದಲ್ಲಿ ಜರುಗಲಿದೆ.

ಜು. 25ರಂದು ಮಧ್ಯಾರಾಧನೆ ನಿಮಿತ್ತ ಬೆಳಿಗ್ಗೆ 6-30ಕ್ಕೆ ಜಯತೀರ್ಥ ಸ್ತುತಿ, ಅಷ್ಟೋತ್ತರ ಶತಪಾರಾಯಣ ನಂತರ 8-30ಕ್ಕೆ ಜಯತೀರ್ಥರ ಭಾವಚಿತ್ರ ಹಾಗೂ ಗ್ರಂಥಗಳ ಮೆರವಣಿಗೆ, ಪಾಲಕಿ ಸೇವೆ, ಅಷ್ಟಾವಧಾನ ಸೇವೆ, ಮಂಗಳಾರತಿ, ಮುಂತಾದ ಕಾರ್ಯಕ್ರಮಗಳು ಜರುಗಲಿದ್ದು, ಸದ್ಭಕ್ತರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಜಯತೀರ್ಥರ ಪರಮಾನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀ ವಿಶ್ವಮಧ್ವ ಮಹಾಪರಿಷತ್‌ನ ಪ್ರಕಟಣೆ ಕೋರಿದೆ.


Spread the love

LEAVE A REPLY

Please enter your comment!
Please enter your name here