ನೇರಳೆ ಹಣ್ಣನ್ನು ಇಂಡಿಯನ್ ಬ್ಲ್ಯಾಕ್ ಬೆರ್ರಿ ಅಥವಾ ಜಾಮೂನ್ ಎಂದೂ ಕರೆಯುತ್ತಾರೆ. ನೇರಳಿ ತಿನ್ನಲು ಸ್ವಲ್ಪ ಹುಳಿ ಎಂದೆನಿಸಿದರೂ, ಉಪ್ಪಿನಲ್ಲಿ ಮಿಕ್ಸ್ ಮಾಡಿಕೊಂಡು ತಿಂದಾಗ ಉಪ್ಪು ಮತ್ತು ಹುಳಿ ರುಚಿ ಎರಡು ಬೆರೆತು ಹೋಗುತ್ತವೆ ಮತ್ತು ವಿಭಿನ್ನ ರುಚಿಯನ್ನು ನೀಡುತ್ತದೆ. ಇದು ಬರೀ ನಿಮ್ಮ ನಾಲಿಗೆಗೆ ರುಚಿ ನೀಡುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.
ರಕ್ತದೊತ್ತಡ ನಿಯಂತ್ರಣ: ಜನಪ್ರಿಯತೆ ಪಡೆದಿರುವ ನೇರಳೆ ಹಣ್ಣು ಹೃದಯಕ್ಕೆ ತುಂಬಾ ಒಳ್ಳೆಯದು. ರಕ್ತದೊತ್ತಡ ಕಡಿಮೆ ಮಾಡುತ್ತದೆ. ಹಾಗೂ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ.
ಮಧುಮೇಹ ನಿಯಂತ್ರಣ: ಇತ್ತೀಚೆಗೆ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ನೇರಳೆ ಹಣ್ಣು ಮಧುಮೇಹ ನಿಯಂತ್ರಣ ಮಾಡುತ್ತದೆ. ಸಕ್ಕರೆ ಕಾಯಿಲೆ ಇರುವವರು ನೇರಳೆ ಹಣ್ಣಿನ ಒಣಗಿದ ಬೀಜವನ್ನು ಪುಡಿ ಮಾಡಿ ದಿನಕ್ಕೆ ಮೂರು ಬಾರಿ ಸೇವಿಸಬೇಕು.
ಕಣ್ಣಿನ ಆರೋಗ್ಯಕ್ಕೆ ಉತ್ತಮ: ನೇರಳೆ ಹಣ್ಣು ಸೇವನೆಯಿಂದ ದೃಷ್ಟಿ ಸುಧಾರಿಸುತ್ತದೆ. ನೇರಳೆ ಹಣ್ಣು ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಕಾಲಜನ್ ಸ್ಥಿರಗೊಳಿಸುವ ಗುಣಲಕ್ಷಣಗಳನ್ನು ಹೊಂದಿದ್ದು, ಅದು ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮಲಬದ್ಧತೆ ನಿವಾರಣೆ: ನೇರಳೆ ಬೀಜ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿ ಅನೇಕ ಸಮಸ್ಯೆಗಳಿಗೆ ಮದ್ದಿದ್ದಂತೆ.
ಹೊಟ್ಟೆ, ಕರುಳು ಮತ್ತು ಮೂತ್ರನಾಳಕ್ಕೆ ಒಳ್ಳೆಯದು: ಬ್ಲೂಬೆರಿಹಣ್ಣುಗಳನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆಗೆ ಮತ್ತು ಯುಟಿಐಗಳ ಪುನರಾವರ್ತಿತ ಮೂತ್ರದ ಸೋಂಕಿನ ರೋಗಗಳಿಗೆ ಪರಿಹಾರವನ್ನು ತರುತ್ತದೆ. ಸಾಂಪ್ರದಾಯಿಕ ಔಷಧವು ಬೆರಿಹಣ್ಣುಗಳು ಜಠರಗರುಳಿನ ಪರಿಸ್ಥಿತಿಗಳು ಮತ್ತು ಮೂತ್ರದ ಸೋಂಕುಗಳೆರಡಕ್ಕೂ ಉಪಯುಕ್ತ ಪರಿಹಾರವಾಗಿದೆ.