ಕೆಲವರಿಗೆ ನಾಲಿಗೆಯಲ್ಲಿ ಪದೇ ಪದೇ ಹುಣ್ಣುಗಳು ಕಾಣಿಸುತ್ತವೆ. ಇದನ್ನು ವೈದ್ಯರು ಮೌತ್ ಅಲ್ಸರ್ ಎಂದು ಕರೆಯುತ್ತಾರೆ.
ಹೆಚ್ಚಿನವರು ಇದನ್ನು ದೇಹದ ಉಷ್ಣತೆ ಹೆಚ್ಚಳದ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ತಜ್ಞರು ಹೇಳುವಂತೆ, ಇದು ಕೆಲವೊಮ್ಮೆ ದೇಹದ ಒಳಗಿನ ಸಮಸ್ಯೆಗಳ ಸೂಚನೆ ಆಗಬಹುದು.
ಹುಣ್ಣುಗಳ ಪ್ರಮುಖ ಕಾರಣಗಳು:
- ದೇಹದ ಉಷ್ಣತೆ ಹೆಚ್ಚಾದಾಗ.
- ವಿಟಮಿನ್ B ಮತ್ತು C ಕೊರತೆ.
- ಹೆಚ್ಚು ಮಸಾಲೆ, ಬಿಸಿ ಆಹಾರ ಸೇವನೆ.
- ಬಾಯಿಯ ಸ್ವಚ್ಛತೆಯ ಕೊರತೆ.
- ನಾಲಿಗೆಗೆ ಪದೇಪದೇ ಗಾಯವಾಗುವುದು.
- ಮಾನಸಿಕ ಒತ್ತಡ, ಹಾರ್ಮೋನ್ ಬದಲಾವಣೆ.
- ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು.
- ರೋಗನಿರೋಧಕ ಶಕ್ತಿಯ ದುರ್ಬಲತೆ.
- ಸೋಂಕು ಅಥವಾ ಅಲರ್ಜಿ ಸಮಸ್ಯೆ.
- ತಡೆಗಟ್ಟುವುದು ಹೇಗೆ?
- ಮಸಾಲೆ, ಹುಳಿ ಮತ್ತು ಬಿಸಿ ಆಹಾರ ಕಡಿಮೆ ಸೇವನೆ.
- ಪ್ರತಿದಿನ ಬಾಯಿಯನ್ನು ಸ್ವಚ್ಛವಾಗಿ ತೊಳೆಯುವುದು.
- ಸಾಕಷ್ಟು ನೀರು ಕುಡಿಯುವುದು.
- ವಿಟಮಿನ್ B ಮತ್ತು C ಇರುವ ಹಣ್ಣು, ಹಸಿರು ತರಕಾರಿ ಸೇವನೆ.
- ಒತ್ತಡ ಕಡಿಮೆ ಮಾಡಿ ಸರಿಯಾಗಿ ನಿದ್ರೆ.
- ತಂಬಾಕು ಮತ್ತು ಮದ್ಯಪಾನದಿಂದ ದೂರವಿರಬೇಕು.
- ವೈದ್ಯರನ್ನು ಸಂಪರ್ಕಿಸಬೇಕಾದ ಸಂದರ್ಭಗಳು:
- 10–15 ದಿನಗಳಲ್ಲಿ ಗುಣವಾಗದಿದ್ದರೆ.
- ಪದೇಪದೇ ಹುಣ್ಣುಗಳು ಕಾಣಿಸಿದರೆ.
- ತೀವ್ರ ನೋವು, ಊತ, ಜ್ವರ, ರಕ್ತಸ್ರಾವ ಕಂಡುಬಂದರೆ.
- ಊಟದಲ್ಲಿ ತೊಂದರೆ ಅಥವಾ ತೂಕ ಕಡಿಮೆಯಾಗುತ್ತಿರುವುದು.
ನಾಲಿಗೆಯ ಹುಣ್ಣುಗಳನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸಬಾರದು. ದೀರ್ಘಕಾಲ ಇದ್ದರೆ ಅದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಸೂಚನೆ ನೀಡಬಹುದು. ಸಮಯಕ್ಕೆ ಸರಿಯಾಗಿ ಗಮನಿಸಿ, ಚಿಕಿತ್ಸೆ ಪಡೆಯುವುದು ಅಗತ್ಯ.



