ಅಕ್ಕಿಗೆ ಹುಳುಗಳು ಬರುತ್ತಿವೆಯಾ..? ಇದರಿಂದ ಮುಕ್ತಿ ಪಡೆಯಲು ಈ ಟಿಪ್ಸ್ ಟ್ರೈ ಮಾಡಿ

0
Spread the love

ಭಾರತದಲ್ಲಿ ಅನ್ನ ಜನಜೀವನದ  ದೈನಂದಿನ ಆಹಾರವಾಗಿದೆ. ಅದಕ್ಕಾಗಿಯೇ ಅನೇಕ ಜನರು ಒಂದೇ ಬಾರಿಗೆ ಸಾಕಷ್ಟು ಅಕ್ಕಿಯನ್ನು ಖರೀದಿಸಿ ಇಟ್ಟುಕೊಳ್ಳುತ್ತಾರೆ. ಆದರೆ ಹೀಗೆ ಮನೆಗೆ ತಂದಿಟ್ಟ ಹೆಚ್ಚಿನ ಪ್ರಮಾಣದ ಅಕ್ಕಿಯಲ್ಲಿ ಹಲವಾರು ಬಾರಿ ಹುಳುಗಳಾಗುವುದನ್ನು ನೋಡಬಹುದು.

Advertisement

ಅನೇಕ ಜನರಿಗೆ ಅಕ್ಕಿಯನ್ನು ಸಂಗ್ರಹಿಸಲು ಸರಿಯಾದ ಮಾರ್ಗ ಯಾವುದೆಂದು ತಿಳಿದಿಲ್ಲ. ಹೀಗಾಗಿ ಅಕ್ಕಿಯಲ್ಲಿ ಹುಳುಗಳಾಗುತ್ತವೆ. ಪ್ರತಿದಿನ ಈ ಹುಳುಗಳನ್ನು ತೆಗೆದು ಕ್ಲೀನ್ ಮಾಡಿ ಬಳಸುವುದು ಕಷ್ಟ. ಹೀಗಾಗಿ ಒಂದಿಷ್ಟು ಟಿಪ್ಸ್ ಪಾಲಿಸಿದರೆ ಅಕ್ಕಿಗೆ ಕ್ರಿಮಿ ಕೀಟಗಳು ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಬಿರಿಯಾನಿ ಎಲೆ: ಬಿರಿಯಾನಿ ಎಲೆಗಳ ವಾಸನೆಯು ಹುಳುಗಳು ಮತ್ತು ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ಇದು ಅಕ್ಕಿಯನ್ನು ಯಾವಾಗಲೂ ತಾಜಾವಾಗಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಅಕ್ಕಿಯೊಂದಿಗೆ 4-5 ಬಿರಿಯಾನಿ ಎಲೆಗಳನ್ನು ಮಿಶ್ರಣ ಮಾಡಿ.

ಲವಂಗಗಳು: ಲವಂಗಗಳು ಪರಿಮಳಯುಕ್ತ ಗಿಡಮೂಲಿಕೆಗಳಾಗಿವೆ. ಆದ್ದರಿಂದ 10 ಲವಂಗವನ್ನು ತೆಗೆದುಕೊಂಡು ಅದನ್ನು ಅಕ್ಕಿಯೊಂದಿಗೆ ಮಿಶ್ರಣ ಮಾಡಿ ಇಟ್ಟರೆ, ಇದರಲ್ಲಿ ಕೀಟಗಳು ಬರಲು ಸಾಧ್ಯವಿಲ್ಲ.

ಬೆಳ್ಳುಳ್ಳಿ: ಹುಳುಗಳು ಮತ್ತು ಕೀಟಗಳು ಬೆಳ್ಳುಳ್ಳಿಯ ವಾಸನೆಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಅಕ್ಕಿಯಲ್ಲಿ ಸ್ವಲ್ಪ ಬೆಳ್ಳುಳ್ಳಿಯನ್ನು ಮಿಶ್ರಣ ಮಾಡಿ.

ಶೈತ್ಯೀಕರಣಗೊಳಿಸಿ: ಅನೇಕ ಜನರು ಕಾಳುಗಳು ಮತ್ತು ಬೀಜಗಳನ್ನು ದೀರ್ಘಕಾಲದವರೆಗೆ ಕೆಡದಂತೆ ಸುರಕ್ಷಿತವಾಗಿರಿಸಲು ಫ್ರಿಜ್ನಲ್ಲಿ ಇಡುತ್ತಾರೆ. ಹೀಗೆ ಅಕ್ಕಿಯನ್ನು ಕೂಡ ಫ್ರಿಜ್ ನಲ್ಲಿಟ್ಟರೆ ಹುಳು ಬರುವುದಿಲ್ಲ. ಇದನ್ನು ಒಮ್ಮೆ ನೀವು ಟ್ರೈ ಮಾಡಬಹುದು.

ಸೂರ್ಯನ ಬಿಸಲು: ಮೊದಲೇ ಹೇಳಿದಂತೆ, ನಿಮಗೆ ಸಮಯ ಸಿಕ್ಕಾಗಲೆಲ್ಲಾ ಅಕ್ಕಿಯನ್ನು ಬಿಸಿಲಿನಲ್ಲಿ ಒಣಗಿಸಿ. ಹೀಗೆ ಮಾಡುವುದರಿಂದ ಕೀಟಗಳು ಮತ್ತು ಹುಳುಗಳು ಬರುವುದಿಲ್ಲ. ಅಕ್ಕಿ ಮಾತ್ರವಲ್ಲದೇ ಒಣ ಮತ್ತು ತಾಜಾ ಕಾಳುಗಳಿಗೂ ಕೂಡ ಈ ಟಿಪ್ಸ್ ಟ್ರೈ ಮಾಡಬಹುದು.


Spread the love

LEAVE A REPLY

Please enter your comment!
Please enter your name here