ಗದಗ: ನೀವು ಸಿಎಂ ಆಗಿದ್ದಾಗ ಅಕ್ರಮದ ವರದಿಗಳು ನಿಮ್ಮ ಕೈಯಲ್ಲಿದ್ದವು, ನೀವು ಅಭಿಷೇಕ ಮಾಡುತ್ತ ಕುಳಿತ್ತಿದ್ರಾ..? ಎಂದು HDKಗೆ ಸಚಿವ ಎಚ್ ಕೆ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ. ಗದಗನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆ ಕುರಿತು ಎಲ್ಲ ವಿವರಗಳೊಂದಿಗೆ ಸುದೀರ್ಘವಾಗಿ ಪತ್ರ ಬರೆದಿದ್ದೇನೆ.
ಈ ಪತ್ರಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕುಂಬಕರ್ಣ, ರಾವಣ ಎಂಬ ಪೌರಾಣಿಕ ಸನ್ನಿವೇಶದ ಪಾತ್ರಗಳ ಹೆಸರನ್ನು ತೆಗೆದುಕೊಂಡು ಪತ್ರವನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದು ಹೇಳಿದ್ದಾರೆ. ಆ ಪತ್ರ ಕಸದ ಬುಟ್ಟಿಗೋ, ಕ್ರಮದ ತೊಟ್ಟಿಗೋ ಎಂಬುದನ್ನು ಯಾರಿಗೆ ಪತ್ರ ಬರೆದಿದ್ದೀನೋ ಅವರು ಅದನ್ನು ನಿರ್ಣಯಿಸುತ್ತಾರೆ ಎಂದು ಹೇಳಿದ್ದಾರೆ.
ಒಂದೂವರೆ ಲಕ್ಷ ಕೋಟಿ ಮೊತ್ತದ ಅಕ್ರಮ ಗಣಿಗಾರಿಕೆ ಸಂಪತ್ತು ಕನ್ನಡಿಗರಿಗೆ ವಾಪಾಸ್ ತರಬೇಕೆನ್ನುವುದು ನನ್ನ ಪತ್ರದ ಉದ್ದೇಶವಾಗಿದೆ. ಕುಮಾರಸ್ವಾಮಿ ಅವರೇ ನೀವು ದೊಡ್ಡ ಸ್ಥಾನದಲ್ಲಿದ್ದಿರಿ. ವ್ಯವಸ್ಥೆಗೆ ಸವಾಲಾಗಿರುವ ಅಕ್ರಮ ಲೂಟಿ ಗುನ್ನೆಯಿಂದ ನಷ್ಟವಾಗಿರುವ ಅಮೂಲ್ಯವಾಗಿರುವ ಸಂಪತ್ತು ಹಾಗೂ ಅದರ ಮೌಲ್ಯವನ್ನು ಕನ್ನಡಿಗರಿಗೆ ವಾಪಸ್ ತರಲು ಅಡಿ ಇಡಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.