ದಾಲ್ಚಿನ್ನಿ ಕಡ್ಡಿಗಳನ್ನು ಭಾರತೀಯ ರೆಸ್ಟೊರೆಂಟ್‌ಗಳು ಮಸಾಲೆಯಾಗಿ ಬಳಸುತ್ತವೆ . ಬಿಸಿ ನೀರಿನಲ್ಲಿ ದಾಲ್ಚಿನ್ನಿ ಸೇರಿಸುವುದರಿಂದ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯಕವಾಗಿದೆ. ಸಮಯಂ ವರದಿ ಪ್ರಕಾರ, ದಾಲ್ಚಿನ್ನಿ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಮೆಗ್ನೀಸಿಯಮ್, ರಂಜಕ, ತಾಮ್ರ, ಸತು, ವಿಟಮಿನ್ಗಳು, ನಿಯಾಸಿನ್, ಥಿಯಾಜಿನ್ನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ.
ಹೀಗಾಗಿ ತೂಕ ಇಳಿಕೆಗೆ ದಾಲ್ಚಿನ್ನಿ ಬಹಳ ಸಹಾಯಕವಾಗಿದೆ. ದಾಲ್ಚಿನ್ನಿಯನ್ನು ಆಹಾರದಲ್ಲಿ ಸೇರಿಸಿದ್ರೆ ದೇಹದ ಚಯಾಪಚಯ ಹೆಚ್ಚಿಸುತ್ತದೆ. ಇದು ತೂಕ ನಷ್ಟದ ಪ್ರಕ್ರಿಯೆ ವೇಗವಾಗಿಸುತ್ತದೆ. ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ.
ದಾಲ್ಚಿನ್ನಿ ನೀರು: ದಾಲ್ಚಿನ್ನಿ ಪೀಸ್ಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿ, ಮರುದಿನ ಬೆಳಗ್ಗೆ ಆ ನೀರನ್ನು ಕುಡಿಯಿರಿ ಅಥವಾ ದಾಲ್ಚಿನ್ನಿ ಕಡ್ಡಿಯನ್ನು ತುಂಡು ಮಾಡಿ ನೀರಿನಲ್ಲಿ ಕುದಿಸಿ ಕುಡಿಯಿರಿ. ಈ ವಿಧಾನ ಕೂಡ ತೂಕ ಇಳಿಕೆಗೆ ಸಹಕಾರಿ ಆಗಿದೆ.
ದಾಲ್ಚಿನ್ನಿ ಚಹಾ: ದಾಲ್ಚಿನ್ನಿ ಚಹಾ ನಮ್ಮ ದೇಹದಲ್ಲಿನ ಬೊಜ್ಜನ್ನು ಐಸ್ ಕ್ರೀಮ್ನಂತೆ ಕರಗಿಸುತ್ತದೆ. ಇದಕ್ಕಾಗಿ ಒಂದು ಪಾತ್ರೆಯಲ್ಲಿ 2 ಲೋಟ ನೀರು ಸುರಿದು, ದಾಲ್ಚಿನ್ನಿ ಪೀಸ್ಗಳು ಮತ್ತು ಶುಂಠಿ ಪೀಸ್ಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಕೊನೆಗೆ ಸ್ಟವ್ ಆಫ್ ಮಾಡಿ. ಈ ನೀರನ್ನು ಫಿಲ್ಟರ್ ಮಾಡಿ, ಜೇನುತುಪ್ಪ ಮತ್ತು ನಿಂಬೆ ರಸ ಬೆರೆಸಿ ಕುಡಿಯಿರಿ. ಇದರಿಂದ ತೂಕವನ್ನು ಇಳಿಸಿಕೊಳ್ಳಿ.
ದೇಹದ ತೂಕ: ದಾಲ್ಚಿನ್ನಿ ನೀರನ್ನು ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ದೇಹದ ತೂಕವನ್ನು ಕಡಿಮೆ ಮಾಡಲು ಮತ್ತು ಸಮತೋಲನಗೊಳಿಸಲು ಈ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು. ಇದಕ್ಕಾಗಿ ದಾಲ್ಚಿನ್ನಿ ಕಡ್ಡಿಯನ್ನು ನೀರಿನಲ್ಲಿ ನೆನೆಸಿ, ನಂತರ ಅದನ್ನು ಕುದಿಸಿ ಕುಡಿಯುವುದರಿಂದ ದೇಹದಲ್ಲಿನ ಕ್ಯಾಲೋರಿ ಕರಗುತ್ತದೆ.