ನೀವು ಕೂಡ ವಿರಾಟ್ ಅಭಿಮಾನಿಯಾ!? ಹಾಗಿದ್ರೆ ಕಿಂಗ್ ಕೊಹ್ಲಿ ಪದೇ-ಪದೇ ಕೇಳುವ ಹಾಡು ಯಾವ್ದು?

0
Spread the love

ಕ್ರಿಕೆಟ್ ಜಗತ್ತಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅನ್ನೋದ್ರಲ್ಲಿ ಇನ್ನೊಂದು ಮಾತಿಲ್ಲ. ಈಗಾಗಲೇ ಐಪಿಎಲ್ ಸೀಸನ್​​ 18ರಲ್ಲಿ ಕಿಂಗ್​ ಕೊಹ್ಲಿಯ ಕ್ಲಾಸ್​ ಆಟದ ಅಬ್ಬರ ಜೋರಾಗಿದೆ. ವಿರಾಟನ ಮಾಸ್ಟರ್​​ ಕ್ಲಾಸ್​​ ಇನ್ನಿಂಗ್ಸ್​ಗಳಿಗೆ ಕ್ರಿಕೆಟ್​ ಲೋಕ ಸಲಾಂ ಅಂತಿದೆ. ಪರ್ಫೆಕ್ಟ್​ ಇನ್ನಿಂಗ್ಸ್​ ಕಟ್ತಿರೋ ವಿರಾಟ್​ ಚೇಸಿಂಗ್​ಗೆ ನಾನೇ ಮಾಸ್ಟರ್​​ ಅನ್ನೋದನ್ನ ಪದೇ ಪದೆ ನಿರೂಪಿಸ್ತಿದ್ದಾರೆ. ಇಲ್ಲಿ ಅಬ್ಬರವಿಲ್ಲ, ಆರ್ಭಟವಿಲ್ಲ. ಸೈಲೆಂಟ್​ ಆಟದಿಂದಲೇ ಸ್ವೀಟ್​ ವಿಲನ್​ ಆಗಿ ವಿರಾಟ್​​ ಎದುರಾಳಿಗಳನ್ನ ಕಾಡ್ತಿದ್ದಾರೆ.

Advertisement

ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ ಸ್ಟಾರ್​ ಬ್ಯಾಟರ್ ಆಗಿದ್ದು, ಕಳೆದ 18 ವರ್ಷಗಳಿಂದ ಆರ್​ಸಿಬಿ ತಂಡದಲ್ಲಿ ಆಡುತ್ತಿರುವುದು ವಿಶೇಷವಾಗಿದೆ. ಕೊಹ್ಲಿ ಮೈದಾನದಲ್ಲಿ ಅಭ್ಯಾಸ ಮಾಡುವಾಗ, ಏರ್​ಪೋರ್ಟ್​, ವಿಮಾನದಲ್ಲಿ ಪ್ರಯಾಣ ಮಾಡುವಾಗ ಅದೊಂದು ಸಾಂಗ್ ಅನ್ನು ಪದೇ ಪದೇ ಕೇಳುತ್ತಿರುತ್ತಾರೆ. ಆ ಹಾಡು ಎಂದರೆ ವಿರಾಟ್​ಗೆ ತುಂಬಾ ಇಷ್ಟವಂತೆ. ಹೀಗಾಗಿಯೇ ಏರ್​​ಫೋನ್​ ಹಾಕೊಂಡು ಒಂದೇ ಹಾಡನ್ನು ಪದೇ ಪದೇ ಕೇಳುತ್ತಿರುತ್ತಾರೆ.

ವಿರಾಟ್ ಕೊಹ್ಲಿ ಅಭ್ಯಾಸ ಮಾಡುವಾಗ ಹೆಚ್ಚಾಗಿ ಕೇಳುವ ಹಾಡು ಎಂದರೆ ಅದು ತಮಿಳು ಸಿನಿಮಾದ ಹಾಡು. ಅದೇ 2023ರಲ್ಲಿ ರಿಲೀಸ್ ಆಗಿರುವ ನಟ ಸಿಲಂಬರಸನ್ ಅಥವಾ ಸಿಂಬು ಅಭಿನಯದ ಪಾಥು ಥಾಲಾ ಮೂವಿಯ ನೀ ಸಿಂಗಮ್​ ಧಾನ ಎನ್ನುವ ಹಾಡನ್ನು ವಿರಾಟ್​ ಕೊಹ್ಲಿ ಮತ್ತೆ ಮತ್ತೆ ಕೇಳುತ್ತಿರುತ್ತಾರೆ. ಇದನ್ನು ಲೈವ್​ನಲ್ಲೇ ಕೊಹ್ಲಿ ತಮ್ಮ ಮೊಬೈಲ್​ನಲ್ಲಿ ಪ್ಲೇ ಮಾಡಿ ತೋರಿಸಿದ್ದಾರೆ.

ಸಂದರ್ಶನವೊಂದರಲ್ಲಿ ನಿಮ್ಮ ಫೇವರಿಟ್ ಸಾಂಗ್ ಯಾವುದು ಎಂದು ಕೊಹ್ಲಿ ಅವರನ್ನು ಕೇಳಲಾಗಿರುತ್ತದೆ. ಆಗ ವಿರಾಟ್ ಕೊಹ್ಲಿ, ನಾನು ಮತ್ತೆ ಮತ್ತೆ ಕೇಳುವ ಹಾಡನ್ನು ನೀವು ಕೇಳಿದ್ರೆ ಶಾಕ್ ಆಗ್ತೀರಾ ಎಂದು ತಮ್ಮ ಮೊಬೈಲ್​ನಲ್ಲಿ, ನೀ ಸಿಂಗಮ್​ ಧಾನ ಹಾಡನ್ನು ಪ್ಲೇ ಮಾಡಿದ್ದಾರೆ. ಇನ್ನು ಈ ಹಾಡನ್ನು ಮೂವಿಯಲ್ಲಿ ಸಿಂಗರ್​ ಸಿದ್​​ ಶ್ರೀರಾಮ್ ಹಾಡಿದ್ದು ಇದಕ್ಕೆ ಎ.ಆರ್ ರೆಹಮಾನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here